arrest

ವ್ಯಕ್ತಿಯೊಬ್ಬರ ಅಕ್ರಮ ಬಂಧನ ➤ ಇನ್ಸ್ ಪೆಕ್ಟರ್ ವಿರುದ್ಧ DYSP ದಾಳಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿಡಲಾಗಿದ್ದ ಶೇಷಾದ್ರಿಪುರ ಠಾಣೆ ಮೇಲೆ ರಾಜ್ಯ ಮಾನವ ಹಕ್ಕು ಆಯೋಗದ ಅಧಿಕಾರಿಗಳು ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್‌ ಕುಮಾರ್ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ (ಎಸ್‌ಎಚ್‌ಆರ್‌ಸಿ) ದಾಖಲಾಗಿದ್ದ ಪ್ರಕರಣದಲ್ಲಿ ಡಿ.ವೈ.ಎಸ್ಪಿ ಕೇಶವ್ ನೇತೃತ್ವದ ತಂಡ ಈ ದಾಳಿ ಮಾಡಿದೆ. ‘ಸ್ಥಳೀಯ ನಿವಾಸಿ ಆರ್. ಶ್ರೀಧರ್ ಎಂಬುವರನ್ನು ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದರು. ಯಾವುದೇ ದೂರು ಹಾಗೂ ಎಫ್‌ಐಆರ್ ಇಲ್ಲದಿದ್ದರೂ ಠಾಣೆಯಲ್ಲಿ […]

ವ್ಯಕ್ತಿಯೊಬ್ಬರ ಅಕ್ರಮ ಬಂಧನ ➤ ಇನ್ಸ್ ಪೆಕ್ಟರ್ ವಿರುದ್ಧ DYSP ದಾಳಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್

(ನ್ಯೂಸ್ ಕಡಬ)newskadaba.com  ಚಿಕ್ಕಬಳ್ಳಾಪುರ, ಜ.20. ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆಯಾಗಿದ್ದು, 2000 ರೂಪಾಯಿ ಮುಖಬೆಲೆಯ 1.29 ಕೋಟಿ ಮೌಲ್ಯದ ನಕಲಿ ನೋಟುಗಳನ್ನ ಚಿಂತಾಮಣಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಊಲವಾಡಿ ಗ್ರಾಮದ ಬಾರ್ನ್ ಫೌಂಡೇಶನ್ ಕಟ್ಟಡದಲ್ಲಿ ನಡೆಯುತ್ತದ್ದ ನಕಲಿ ನೋಟು ತಯಾರಿಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶೇಖ್ ಹಿದಾಯತ್, ದಾವೂದ್ ವಾಸಿಮ್ ಹಾಗೂ ಶಿವಣ್ಣ ಬಂಧಿತ ಆರೋಪಿಗಳು. ಕಟ್ಟಡದ ಕೋಣೆಯೊಂದರಲ್ಲೇ ನಕಲಿ ನೋಟುಗಳನ್ನು ಪ್ರಿಂಟ್​ ಮಾಡುತ್ತಿದ್ದರು.    

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನಕ್ಕೆ ವಾರಂಟ್ ಜಾರಿ !!

(ನ್ಯೂಸ್ ಕಡಬ)newskadaba.com ಸಂಪ್ಯ, ಜ.20. ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಡಬ ಮೂಲದ  ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಕೊಯಿಲ ಗ್ರಾಮದ ಕಲಾಯಿ ನಿವಾಸಿಯಾಗಿದ್ದು ಪ್ರಸ್ತುತ ಮಂಜೇಶ್ವರ ಉಪ್ಪಳ ಗ್ರಾಮದ ಕೈಕಂಬ ಜಂಕ್ಷನ್ ಇಂಡಿಯನ್ ಗ್ಯಾರೇಜ್ ಬಳಿ ವಾಸವಿರುವ ಇಬ್ರಾಹಿಂ ಖಲಂದರ್ ಯಾನೆ ಇಬ್ರಾಹಿಂ ಬಂಧಿತ ಆರೋಪಿ. ಈತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಸಂಪ್ಯ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಉದಯರವಿ ಅವರ ಸಲಹೆಯಂತೆ ಗ್ರಾಮಾಂತರ ಠಾಣಾ ಹೆಡ್‌ಕಾನ್‌ ಸ್ಟೇಬಲ್‌ಗಳಾದ ಹರೀಶ್, ಪ್ರವೀಣ್ ಮತ್ತು ಕಾನ್‌ಸ್ಟೇಬಲ್ ಸಚಿನ್‌ರವರು ಜ.19ರಂದು ಕಾಸರಗೋಡು ವಿದ್ಯಾನಗರದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನಕ್ಕೆ ವಾರಂಟ್ ಜಾರಿ !! Read More »

ಕರಾವಳಿ, ಕ್ರೈಮ್ ನ್ಯೂಸ್

ಕರ್ತವ್ಯನಿರತ ಸರ್ಕಲ್ ಇನ್ಸ್ ಪೆಕ್ಟರ್​ ಮೇಲೆ ಹಲ್ಲೆ ! ➤  ಮಾಜಿ ಕಾರ್ಪೊರೇಟರ್​ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.20. ಕರ್ತವ್ಯ ನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಬಿಜೆಪಿ ಕಾರ್ಪೊರೇಟರ್​ ವಿ.ಬಾಲಕೃಷ್ಣನನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್ ಮಾಜಿ ಕಾರ್ಪೋರೇಟರ್ ಬಾಲಕೃಷ್ಣ ಬಂಧಿತ ಆರೋಪಿ. ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು  ಕಗ್ಗಲೀಪುರ ಠಾಣೆಗೆ ತೆರಳಿದ್ದರು. ಇದೇ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿಯಾಗಿ ಕೊನೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಬಾಲಕೃಷ್ಣ

ಕರ್ತವ್ಯನಿರತ ಸರ್ಕಲ್ ಇನ್ಸ್ ಪೆಕ್ಟರ್​ ಮೇಲೆ ಹಲ್ಲೆ ! ➤  ಮಾಜಿ ಕಾರ್ಪೊರೇಟರ್​ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗಳನ್ನು ಕೊಂದ ಪಾಪಿ ತಾಯಿ !

(ನ್ಯೂಸ್ ಕಡಬ)newskadaba.com  ಜೈಪುರ, ಜ.20. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯನ್ನು ಕೊಂದು ಚಲಿಸುವ ರೈಲಿನಿಂದ ಶವ ಎಸೆದ ಆರೋಪದ ಮೇಲೆ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸುನೀತಾ ಮತ್ತು ಸನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸುನೀತಾ ತನ್ನ ಮಗಳು ಕಿರಣ್‌ನನ್ನು ಕತ್ತು ಹಿಸುಕಿ ಸನ್ನಿ ಸಹಾಯದಿಂದ ಬೆಡ್‌ಶೀಟ್‌ನಲ್ಲಿ ಶವವನ್ನು ಸುತ್ತಿಕೊಂಡು ಶ್ರೀಗಂಗಾನಗರ ರೈಲು ನಿಲ್ದಾಣದಿಂದ ರೈಲು ಹತ್ತಿದ್ದಾರೆ. ರೈಲ್ವೆ ನಿಲ್ದಾಣ ತಲುಪುವ

ಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗಳನ್ನು ಕೊಂದ ಪಾಪಿ ತಾಯಿ ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಿವುಡ್ ನಟಿ ರಾಖಿ ಸಾವಂತ್ ಅರೆಸ್ಟ್ !

(ನ್ಯೂಸ್ ಕಡಬ)newskadaba.com ಮುಂಬೈ, ಜ.20. ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮುಂಬೈ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ರಾಖಿ ಸಾವಂತ್ ಬಂಧನದ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್’ ನಲ್ಲಿ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ‘ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ಅಂಬೋಲಿ ಪೊಲೀಸರು ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ‌. ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ರಾಖಿ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಮಾನಹಾನಿ ಮಾಡಿದ್ದಾರೆಂದು ಶೆರ್ಲಿನ್ ದೂರು

ಬಾಲಿವುಡ್ ನಟಿ ರಾಖಿ ಸಾವಂತ್ ಅರೆಸ್ಟ್ ! Read More »

ರಾಷ್ಟ್ರೀಯ ನ್ಯೂಸ್

ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ➤ ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ವಿಟ್ಲ, ಜ.20. ಪ್ರಸಿದ್ಧ ವಿಟ್ಲ ಜಾತ್ರೆ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಆರು ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಗಣೇಶ್‌ ಕಡಂಬು, ಮಂಜುನಾಥ ಸೇರಿ ಇತರ ನಾಲ್ವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ವಿಟ್ಲ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಸುರೇಶ್‌ ದಾಸ್‌ ಎಂಬವರಿಗೆ ತಡರಾತ್ರಿ ಅಂಗಡಿ ಬಂದ್ ಮಾಡುವುದೇಕೆ ಎಂದು ಪ್ರಶ್ನಿಸಿ ಆರು ಮಂದಿ ಆರೋಪಿಗಳು

ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ➤ ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ನಟಿ ರಾಖಿ ಸಾವಂತ್ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜ. 19. ಆದಿಲ್ ದುರಾನಿ ಅವರನ್ನು ಮದುವೆಯಾದಂದಿನಿಂದ ಸುದ್ದಿಯಲ್ಲಿರುವ ರಾಖಿ ಸಾವಂತ್ ಅವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ ಎಂದು ನಟಿ ಶೆರ್ಲಿನ್ ಚೋಪ್ರಾ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ನಟಿ ಶೆರ್ಲಿನ್ ಚೋಪ್ರಾ ಅವರು ನೀಡಿದ ದೂರಿನಂತೆ ಅಂಬೋಲಿ ಪೊಲೀಸರು ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು “ಎಫ್ಐಆರ್ 883/2022 ಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ತಿರಸ್ಕರಿಸಿದ ಬೆನ್ನಲ್ಲೇ ರಾಖಿ ಅವರನ್ನು ಬಂಧಿಸಲಾಗಿದೆ”

ನಟಿ ರಾಖಿ ಸಾವಂತ್ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ➤   ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadab.com  ಗುಜರಾತ್‌, ಜ.18. ವ್ಯಕ್ತಿಯೊಬ್ಬ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಗವಾನ್‌ಪಾರಾ ಪ್ರದೇಶದ ನಿರ್ಜನ ಸ್ಥಳದಲ್ಲಿ ಶವವನ್ನು ಎಸೆದಿರುವುದು ಕಂಡುಬಂದಿದೆ. ನಂತರ ಸ್ಥಳೀಯರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ರಸ್ತೆಗಳನ್ನು ತಡೆದರು ಎಂದು ಅವರು ಹೇಳಿದರು. ಡೈಮಂಡ್ ಪಾಲಿಷರ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ಮರಣೋತ್ತರ

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ➤   ಆರೋಪಿ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಯುವತಿಗೆ ಚೂರಿಯಿಂದ ಇರಿತ ಪ್ರಕರಣ !!   ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadab.com  ಪುತ್ತೂರು, ಜ.18. ಮುಂಡೂರು ಕಂಪದಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಯಶ್ರಿ(23)ನ್ನು ಕನಕಮಜಲು ನಿವಾಸಿ ಉಮೇಶ್ ನಿನ್ನೆ ಮನೆಗೆ ನುಗ್ಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಉಮೇಶ್, ಜಯಶ್ರಿಯ ಸಂಬಂಧಿಕನಾಗಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಆತನ ನಡವಳಿಕೆಯಿಂದ ಬೇಸತ್ತು ಜಯಶ್ರೀ ಇತ್ತೀಚೆಗೆ ಆತನಿಂದ ದೂರ ಸರಿದಿದ್ದಳು, ಇದೇ ಸಿಟ್ಟಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಪುತ್ತೂರು: ಯುವತಿಗೆ ಚೂರಿಯಿಂದ ಇರಿತ ಪ್ರಕರಣ !!   ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top