arrest

ಮಂಜೇಶ್ವರ: 30 ಕಿಲೋ ಗಾಂಜಾ ವಶ ! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಜೇಶ್ವರ, ಜ.30. ಮಂಜೇಶ್ವರ ಮೀಯಪದವಿನ ನಿರ್ಮಾಣ ಹಂತದಲ್ಲಿರುವ ಮನೆಯಿಂದ ಸುಮಾರು 30 ಕಿಲೋ ಗಾಂಜಾ ವನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು ,ಓರ್ವನನ್ನು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮನೆ ಮಾಲಕ ಮುಸ್ತಾಫ ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ.

ಮಂಜೇಶ್ವರ: 30 ಕಿಲೋ ಗಾಂಜಾ ವಶ ! ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ವಿಟ್ಲ: ಸೊಸೈಟಿ ದರೋಡೆಗೆ ಯತ್ನ ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ವಿಟ್ಲ, ಜ.28. ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೋಡಪದವು ಶಾಖೆಯ ಶಟರ್‌ ತುಂಡರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳ ಪೈಕಿ ಓರ್ವನನ್ನು ವಾಹನ ಸಹಿತವಾಗಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಾರೆಬೆಟ್ಟು ನಿವಾಸಿ ಟಿ.ಕೆ. ಅಬ್ದುಲ್‌ ಸಲಾಂ (37) ಬಂಧಿತ ಆರೋಪಿ ಎನ್ನಲಾಗಿದೆ. ಬೈಕ್‌ ಹಾಗೂ ಕಾರಿನಲ್ಲಿ ಆಗಮಿಸಿ ವಿಟ್ಲಪಟ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೋಡಪದವು ಶಾಖೆಯ ಮುಖ್ಯ ಶಟರ್‌ ಅನ್ನು ಗ್ಯಾಸ್‌ ಕಟ್ಟರ್‌ ನಿಂದ ತುಂಡರಿಸಿ ದರೋಡೆಗೆ ವಿಫ‌ಲ ಯತ್ನ

ವಿಟ್ಲ: ಸೊಸೈಟಿ ದರೋಡೆಗೆ ಯತ್ನ ➤ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಜಿಎಸ್​ಟಿ ಹೆಸರಿನಲ್ಲಿ ಖಾಸಗಿ ಕಂಪನಿಗೆ ರೂ.9.6 ಕೋಟಿ ವಂಚನೆ ➤ ಇಬ್ಬರ ಬಂಧನ         

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಜಿಎಸ್​ಟಿ ತೆರಿಗೆ ಕಟ್ಟಬೇಕೆಂದು ಹೇಳಿ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ ಸೋಗಿನಲ್ಲಿ ಖಾಸಗಿ ಸಂಸ್ಥೆಯೊಂದರ ಮಾಲೀಕರಿಗೆ ಬರೋಬ್ಬರಿ ರೂ.9.6 ಕೋಟಿ ವಂಚಿಸಿದ್ದ ಚಾರ್ಟೆಡ್ ಅಕೌಂಟೆಂಟ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಸಂಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ನಿಖಿಲ್ ಹಾಗೂ ವಿನಯ್ ಬಾಬು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಕೊರಿಯಾ ಮೂಲದ ಟರ್ಮಿನಸ್ ಡೆಚಾಂಗ್ ಸೀಟ್ ಎಂಬ ಆಟೋಮೋಟಿವ್ ಖಾಸಗಿ ಕಂಪನಿಗೆ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್

ಜಿಎಸ್​ಟಿ ಹೆಸರಿನಲ್ಲಿ ಖಾಸಗಿ ಕಂಪನಿಗೆ ರೂ.9.6 ಕೋಟಿ ವಂಚನೆ ➤ ಇಬ್ಬರ ಬಂಧನ          Read More »

ಕರ್ನಾಟಕ

ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಇಬ್ಬರು ಕಳ್ಳರು ➤ ಖರೀದಿಸಿದ ಇನ್ನೊಬ್ಬನ ಬಂಧನ                           

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯನ್ನು ಹಿಂಬಾಲಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಸೈದ್‌ ಖಾಸೀಫ್‌(22), ಫರೀದ್‌ ಅಹಮದ್‌(20) ಹಾಗೂ ಕಳವು ಮಾಲು ಸ್ವೀಕರಿಸಿದ್ದ ಪಾದರಾಯನಪುರದ ಸುಲ್ತಾನ್‌ ಪಾಷಾ(27) ಬಂಧಿತರು. ಆರೋಪಿಗಳಿಂದ 48.50 ಗ್ರಾಂ ತೂಕದ ಚಿನ್ನದ ಸರ, ಕದ್ದ ಮೊಬೈಲ್‌ ಮಾರಾಟದಿಂದ ಬಂದಿದ್ದ 4,720 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಈ

ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಇಬ್ಬರು ಕಳ್ಳರು ➤ ಖರೀದಿಸಿದ ಇನ್ನೊಬ್ಬನ ಬಂಧನ                            Read More »

ಕರ್ನಾಟಕ, ಕ್ರೈಮ್ ನ್ಯೂಸ್

4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

(ನ್ಯೂಸ್ ಕಡಬ)newskadaba.com  ಭುವನೇಶ್ವರ, ಜ.27. ನಾಲ್ಕು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಸ್ಕಾ ಬಳಿ ಬಂಧಿಸಲಾಗಿದೆ. ಮಗು ನಾಪತ್ತೆಯಾದ ಬಳಿಕ ಮನೆಯವರು ಮನೆಯ ಟೆರೇಸ್‌ನಿಂದ ರಕ್ತದ ಮಡುವಿನಲ್ಲಿ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲಾಗಲಿಲ್ಲ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕಬ್ಬಿಣದ ಬಾಗಿಲಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂಬುದು

4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.26. ವಾರದ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಇಬ್ಬರು ಖದೀಮರು ಚಾಳಿ ಬಿಡದೆ ಮತ್ತದೇ ದುಷ್ಕೃತ್ಯವೆಸಗಿ ಹೆಣ್ಣೂರು ಪೊಲೀಸರಿಗೆ ಸಿಕ್ಕಿಬಿದ್ದು ಪುನಃ ಜೈಲುಪಾಲಾಗಿದ್ದಾರೆ. ಕುಖ್ಯಾತ ಮನೆಗಳ್ಳರಾದ ಫಯಾಜ್ ಮತ್ತು ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಹೆಣ್ಣೂರು, ರಾಮಮೂರ್ತಿನಗರ ಸೇರಿದಂತೆ ಹಲವೆಡೆ ಅರವತ್ತು ಸಲ ಮನೆಗಳ್ಳತನ ಮಾಡಿದ್ದ ಇವರು ಕೋಲಾರದಲ್ಲಿ ನ್ಯಾಯಾಧೀಶರ ನಿವಾಸದಲ್ಲೂ ಕಳ್ಳತನ ಮಾಡಿದ್ದರು.

ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಮಂಗಳೂರು: ಬಾಲಕಿಗೆ ಕಿರುಕುಳ ನೀಡಲು ಯತ್ನ ➤ ಉತ್ತರ ಪ್ರದೇಶ ಮೂಲದ ವ್ಯಕ್ತಿ ಬಂಧನ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.26. ಮಂಗಳೂರು ತಾಲೂಕಿನ ಮರವೂರಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಉತ್ತರ ಪ್ರದೇಶ ಮೂಲದ ಗೋಪಾಲ್ ಬಿಂದಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಲಿ ಕಾರ್ಮಿಕರಾಗಿರುವ ಬಾಲಕಿಯ ಪೋಷಕರ ದೂರಿನ ಪ್ರಕಾರ, ವ್ಯಕ್ತಿ ಕಾರ್ಮಿಕರ ಕೋಣೆಗೆ ನುಸುಳಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆರೋಪಿಯ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ

ಮಂಗಳೂರು: ಬಾಲಕಿಗೆ ಕಿರುಕುಳ ನೀಡಲು ಯತ್ನ ➤ ಉತ್ತರ ಪ್ರದೇಶ ಮೂಲದ ವ್ಯಕ್ತಿ ಬಂಧನ Read More »

ಕರಾವಳಿ

ಅಕ್ರಮ ಗೋವು ಸಾಗಣೆ  ➤ ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ತೀರ್ಥಹಳ್ಳಿ, ಜ.25. ವಧೆಯ ಉದ್ದೇಶಕ್ಕಾಗಿ ಅಕ್ರಮವಾಗಿ ಗೋವು ಕಳ್ಳ ಸಾಗಣೆ ಮಾಡಿದ್ದ ಆರೋಪಿಗಳ ವಿರುದ್ಧ ಐಪಿಸಿ ಕಲಂ 379, ಕರ್ನಾಟಕ ಗೋವು ಸಂರಕ್ಷಣೆ ಮತ್ತು ಗೋ ಹತ್ಯಾ ನಿಷೇಧ ಕಾಯ್ದೆ 1964ರ ಕಲಂ 4, 5, 11 ಹಾಗೂ ಪ್ರಾಣಿಗಳ ವಿರುದ್ಧ ಕ್ರೌರ್ಯ ನಿಷೇಧ ಮತ್ತು ತಡೆಗಟ್ಟುವಿಕೆ ಕಾಯ್ದೆ 1960ರ ಕಲಂ 11ರ ಅಡಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೋಷಾರೋಪ ಸಾಬೀತಾಗಿದ್ದರಿಂದ ಅಪರಾಧಿಗಳಾದ ಶಿವಮೊಗ್ಗದ ಮಹಮ್ಮದ್‌ ನೂರುಲ್ಲಾ, ಸೈಯ್ಯದ್‌ ರಿಯಾಜ್‌, ಮುಕ್ರಮ್‌ಗೆ

ಅಕ್ರಮ ಗೋವು ಸಾಗಣೆ  ➤ ಆರೋಪಿಗಳು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚೀನಾಗೆ ಶಾಕ್ ಕೊಟ್ಟ ತಾಲಿಬಾನ್ ಸರಕಾರ  ➤  ಬೆಲೆ ಬಾಳುವ ಕಲ್ಲುಗಳ ಕಳ್ಳಸಾಗಣೆ ಮಾಡುತ್ತಿದ್ದವರ ಬಂಧನ

(ನ್ಯೂಸ್ ಕಡಬ)newskadaba.com ತಾಲಿಬಾನ್, ಜ.25. ಒಂದಲ್ಲ ಒಂದು ರೀತಿಯಲ್ಲಿ ಕಿತಾಪತಿ ಮಾಡುತ್ತಿರುವ ಚೀನಾಗ ಅಫ್ಘಾನಿಸ್ತಾನ ಬಿಸಿ ಮುಟ್ಟಿಸಿದ್ದು, ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಿದೆ. 1,000 ಮೆಟ್ರಿಕ್ ಟನ್‌ ಲಿಥಿಯಂ-ಒಳಗೊಂಡಿರುವ ಬಂಡೆಗಳನ್ನು ಕಳ್ಳ ಸಾಗಾಣೆ ಮಾಡಿದ ಆರೋಪದಲ್ಲಿ ಇಬ್ಬರು ಚೀನಿ ಪ್ರಜೆಗಳು ಸೇರಿದಂತೆ ಐವರನ್ನು ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪಟ್ಟಣದಲ್ಲಿ ಬಂಧಿಸಲಾಗಿದೆ. ಚೀನಾ ಪ್ರಜೆಗಳು ಅಫ್ಘಾನ್‌ ವ್ಯಕ್ತಿಗಳ ಜೊತೆ ಸೇರಿ ಪಾಕಿಸ್ತಾನದ ಮೂಲಕ ಬೆಲೆಬಾಳುವ ಕಲ್ಲುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ಪಾಕಿಸ್ತಾನ ಮತ್ತು

ಚೀನಾಗೆ ಶಾಕ್ ಕೊಟ್ಟ ತಾಲಿಬಾನ್ ಸರಕಾರ  ➤  ಬೆಲೆ ಬಾಳುವ ಕಲ್ಲುಗಳ ಕಳ್ಳಸಾಗಣೆ ಮಾಡುತ್ತಿದ್ದವರ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ➤  ಮೂವರು ವಶಕ್ಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ಅಕ್ರಮವಾಗಿ ಗೋಮಾಂಸ ತಯಾರಿಸುತ್ತಿದ್ದ ಅಡ್ಡೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ಮದ್ದಡ್ಕ ಬಳಿ ನಡೆದಿದೆ. ಮದ್ದಡ್ಕದ ಹಮೀದ್‌ (46), ಬೇಲೂರು ಗೋಣಿಬೀಡಿನ ಇಸ್ಮಾಯಿಲ್‌ (41) ಮತ್ತು ಹ್ಯಾರಿಸ್‌ (30) ಪೊಲೀಸ್ ವಶವಾದವರು. ಕುವೆಟ್ಟು ಗ್ರಾಮದ ಮದ್ದಡ್ಕದ ಅನಿಲ ಎಂಬಲ್ಲಿಯ ಮನೆಯೊಂದರಲ್ಲಿ ಗೋವಧೆ ಮಾಡಿ ಅಕ್ರಮವಾಗಿ ಮಾಂಸ ತಯಾರಿಸುತ್ತಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ

ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ➤  ಮೂವರು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top