arrest

ಭಯೋತ್ಪಾದಕ ಸಹಚರನ ಬಂಧನ…! ➤ ಗ್ರೆನೇಡ್ ವಶಕ್ಕೆ

(ನ್ಯೂಸ್ ಕಡಬ)newskadaba.com ಜಮ್ಮು ಕಾಶ್ಮೀರ, ಮೇ.27. ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಭಯೋತ್ಪಾದಕ ಸಹಚರನನ್ನು ಬಾರಾಮುಲ್ಲಾ ಜಿಲ್ಲೆಯ ನಾಗಬಲ್ ಚಂದೂಸಾ ಪ್ರದೇಶದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ. ಭಯೋತ್ಪಾದಕನನ್ನು ಬಾರಾಮುಲ್ಲಾದ ಲಾರಿದೂರ ಚಂದೂಸಾ ನಿವಾಸಿ ಮೊಹಮ್ಮದ್ ಅಶ್ರಫ್ ಮಿರ್ ಎಂದು ಗುರುತಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಿದ ಸಮಯದಲ್ಲಿ  ಪೊಲೀಸರು ಅವನ ಬಳಿ ಇದ್ದ  ಗ್ರೆನೇಡ್ ಅನ್ನು ವಶಪಡಿಸಿಕೊಂಡರು.  ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ  ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ  ಪ್ರಕರಣ ಚಂದೂಸಾ ಪೊಲೀಸ್ […]

ಭಯೋತ್ಪಾದಕ ಸಹಚರನ ಬಂಧನ…! ➤ ಗ್ರೆನೇಡ್ ವಶಕ್ಕೆ Read More »

ರಾಷ್ಟ್ರೀಯ ನ್ಯೂಸ್

ಉಡುಪಿ- ಮಂಗಳೂರು ಹೈವೆಯಲ್ಲಿ ಕಾರ್ ರೇಸ್ ➤ ನಾಲ್ವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಪು, ಮೇ.26. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ರೇಸ್ ಮಾಡಲು ಹೋದು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ಸಂಬಂಧ ನಾಲ್ವರು ಚಾಲಕರ ಸಹಿತ ನಾಲ್ಕು ವಾಹನಗಳನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ವಾಹನ ಚಾಲಕರನ್ನು ಉಡುಪಿಯ ಶಾನೂನ್ ಡಿಸೋಜ(25), ಉಡುಪಿ‌ ಕೊಡಂತೂರಿನ ವಿವೇಕ್(23), ಉದ್ಯಾವರ ಗುಡ್ಡೆ ಅಂಗಡಿ ನಿವಾಸಿ ಅಯಾನ್( 24)

ಉಡುಪಿ- ಮಂಗಳೂರು ಹೈವೆಯಲ್ಲಿ ಕಾರ್ ರೇಸ್ ➤ ನಾಲ್ವರು ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.24. ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನ ಅಡ್ಯಾರ್ ಬಳಿಯ ನಿವಾಸಿ ನವಾಝ್ ಶರೀಫ್ ಎಂಬುವವರ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ನೋಂದಣಿ ಸಂಖ್ಯೆ 46/2020 ಕಲಂ 143, 147, 323, 504, 427, 307 ಆರ್/ಡಬ್ಲ್ಯು 149 ಐಪಿಸಿ ಮತ್ತು ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.  

ಮಂಗಳೂರು: ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಅನ್ಯಕೋಮಿನ ಯುವತಿಯ ಜೊತೆ ಅಸಭ್ಯವಾಗಿ ವರ್ತನೆ ಆರೋಪ ➤ ಆರೋಪಿಯ‌ ಬಂಧನ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.17. ದ್ವಿಚಕ್ರ ವಾಹನದಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಯುವಕನೋರ್ವ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕನ್ಯಾನದ ಅಬೂಬಕ್ಕರ್ ಬಂಧಿತ ಆರೋಪಿ ಎನ್ನಲಾಗಿದೆ. ವಿಟ್ಲ ಕಸಬ ಗ್ರಾಮದ ಕಡಂಬು ಸಮೀಪದ ಬನ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನ್ಯಕೋಮೀನ ಯುವತಿಯ ಜೊತೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರು ದಾಖಲಾಗಿತ್ತು.ಈ ಕುರಿತು ಸಿಸಿಟಿವಿ ದೃಶ್ಯಾಧರಿಸಿ ಆರೋಪಿಯ ಬಂಧನ ನಡೆದಿದೆ

ವಿಟ್ಲ: ಅನ್ಯಕೋಮಿನ ಯುವತಿಯ ಜೊತೆ ಅಸಭ್ಯವಾಗಿ ವರ್ತನೆ ಆರೋಪ ➤ ಆರೋಪಿಯ‌ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಐದು ಕೆಜಿ ಐಇಡಿ ಹೊಂದಿದ್ದ ಉಗ್ರನ ಬಂಧನ ➤ ತಪ್ಪಿದ ದೊಡ್ಡ ದುರಂತ

(ನ್ಯೂಸ್ ಕಡಬ)newskadaba.com ಶ್ರೀನಗರ, ಮೇ.08. ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 5 ಕೆಜಿ ಸುಧಾರಿತ ಸ್ಫೋಟಕ ಸಾಧನದೊಂದಿಗೆ (ಐಇಡಿ) ಉಗ್ರನೊಬ್ಬನನ್ನು ಬಂಧಿಸಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಪುಲ್ವಾಮಾ ಪೊಲೀಸರು ಭಯೋತ್ಪಾದಕ ಸಹಚರ ಇಶ್ಫಾಕ್ ಅಹ್ಮದ್ ವಾನಿ ಅನ್ನು ಬಂಧಿಸುವ ಮತ್ತು ಐಇಡಿ (ಸುಮಾರು 5-6 ಕೆಜಿ) ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.  

ಐದು ಕೆಜಿ ಐಇಡಿ ಹೊಂದಿದ್ದ ಉಗ್ರನ ಬಂಧನ ➤ ತಪ್ಪಿದ ದೊಡ್ಡ ದುರಂತ Read More »

ರಾಷ್ಟ್ರೀಯ ನ್ಯೂಸ್

ಯುವತಿಯೋರ್ವಳ ಬರ್ಬರ ಹತ್ಯೆ ! ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ)newskadaba.com  ತ್ರಿಶೂರು, ಏ. 08. ಯುವತಿಯನ್ನು ಬರ್ಬರವಾಗಿ ಕೊಲೆ‌ ಮಾಡಿ ಮೃತದೇಹವನ್ನು ಕಾಡಿನಲ್ಲಿ ಎಸೆದಿರುವ ಘಟನೆ ಕೇರಳದಲ್ಲಿ ನಡೆದಿದೆ. 26 ವರ್ಷದ ಮಹಿಳೆ ಅಥಿರಾಗೆ ಕೊಲೆ‌ ಮಾಡಿ ತ್ರಿಸ್ಸೂರ್ ಜಿಲ್ಲೆಯ ಚಾಲಾಕುಡಿಯ ತುಂಬುರ್ ಮೂಜಿ ಕಾಡಿನಲ್ಲಿ ಎಸೆಯಲಾಗಿದೆ ಎಂದು ವರದಿ ತಿಳಿಸಿದೆ.  

ಯುವತಿಯೋರ್ವಳ ಬರ್ಬರ ಹತ್ಯೆ ! ➤ ಓರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಬಸ್ ಢಿಕ್ಕಿಯಾಗಿ ವ್ಯಕ್ತಿ ಮೃತ್ಯು ➤ ಚಾಲಕನಿಗೆ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.29. ಬಸ್ ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಬಸ್ ಚಾಲಕನಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಬಸ್ ಚಾಲಕ ಏಳನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಉಸ್ಮಾನ್ (37) ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಆರೋಪಿ. ಘಟನೆಯಲ್ಲಿ ಸುಂದರ್ ಸಾಲಿಯಾನ್ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.

ಮಂಗಳೂರು: ಬಸ್ ಢಿಕ್ಕಿಯಾಗಿ ವ್ಯಕ್ತಿ ಮೃತ್ಯು ➤ ಚಾಲಕನಿಗೆ ಜೈಲು ಶಿಕ್ಷೆ Read More »

ಕರಾವಳಿ

ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ     ➤ ಯುವಕನ ಬಂಧನ..!

(ನ್ಯೂಸ್ ಕಡಬ)newskadaba.com ನವದೆಹಲಿ, ಏ.28. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಜಕೀರ್(20) ಬಂಧಿತ ಯುವಕ ಎಂದು ಗುರುತಿಸಲಾಗಿದೆ. ಬಾಂಬ್ ಬೆದರಿಕೆ ಕರೆ ಬಂದಿದ್ದು, ಬಳಿಕ ವಿಮಾನ ನಿಲ್ದಾಣದಲ್ಲಿ ಶೋಧ ನಡೆಸಲಾಗಿತ್ತಲ್ಲದೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಖಚಿತವಾಗಿತ್ತು.  

ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ     ➤ ಯುವಕನ ಬಂಧನ..! Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಬಾಲಕಿ ಮೇಲೆ ಅತ್ಯಾಚಾರ    ➤ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಏ.25. ಫೇಸ್ ಬುಕ್ ನಲ್ಲಿ ಪರಿಚಯವಾದ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪುತ್ತೂರು‌ ಮಹಿಳಾ ಠಾಣೆಯಲ್ಲಿ‌ ಕೇಸ್ ದಾಖಲಾಗಿದೆ. ಕೆಯ್ಯೂರು ಮಾಡಾವು ನಿವಾಸಿ ನವೀನ್ ಎಂಬಾತನ ಮೇಲೆ ಕೇಸ್ ದಾಖಲಾಗಿದೆ. ನವೀನ್ ಕಾಸರಗೋಡು ಮೂಲದ ಅಪ್ರಾಪ್ತ ಬಾಲಕಿಯನ್ನು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದು ಪುತ್ತೂರು ಜಾತ್ರೆಯ ವೇಳೆ ಆಕೆಗೆ ಪುಸಲಾಯಿಸಿ ಮಾಡಾವು ಅಂಗನವಾಡಿ ಕೇಂದ್ರದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.  

ಪುತ್ತೂರು: ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಬಾಲಕಿ ಮೇಲೆ ಅತ್ಯಾಚಾರ    ➤ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ

ಕಾಸರಗೋಡು: ಲಕ್ಷಾಂತರ ಮೌಲ್ಯದ ಮಾದಕ ವಸ್ತು ಸಾಗಾಟ    ➤ ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.23. ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ದಂಪತಿ ಸೇರಿದಂತೆ ನಾಲ್ವರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೇಲ್ಪರಂಬ ದ ಅಬೂಬಕ್ಕರ್ (35), ಪತ್ನಿ ಅಮೀನಾ ಅಸರ್ (23), ಬೆಂಗಳೂರಿನ ಸೂರಜ್ (32) ಮತ್ತು ಎ.ಕೆ ವಸೀಮ್ (32) ಎಂದು ಗುರುತಿಸಲಾಗಿದೆ. ಬಂಧಿತರಿಂದ 150 ಗ್ರಾಂ ಎಂಡಿಎಂಎ ಮಾದಕ ವಸ್ತು ವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.  

ಕಾಸರಗೋಡು: ಲಕ್ಷಾಂತರ ಮೌಲ್ಯದ ಮಾದಕ ವಸ್ತು ಸಾಗಾಟ    ➤ ಆರೋಪಿಗಳು ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top