annamalai

ಬಂಟ್ವಾಳದ ಕ್ರಿಮಿನಲ್ ಗಳ ಅಡ್ಡೆಗೆ ನುಗ್ಗಿದ ರಿಯಲ್ ಸಿಂಗಂ ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.24. ಜಿಲ್ಲಾ ಪೊಲೀಸರ ನಿಯಂತ್ರಣಕ್ಕೆ ಸಿಗದೆ ಕಳೆದ ಹಲವು ದಿನಗಳಿಂದ ಕೋಮು ಗಲಭೆಗೆ ತುತ್ತಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪರಿಸರ ಇದೀಗ ಚಿಕ್ಕಮಗಳೂರಿನ ಖಡಕ್ ಎಸ್ಪಿ ಅಣ್ಣಾಮಲೈಯವರ ಬಿಗಿಮುಷ್ಟಿಯಲ್ಲಿ ಭದ್ರವಾಗಿ ನಿಂತಿದೆ. ರಿಯಲ್ ಸಿಂಗಂ ಎಂದೇ ಖ್ಯಾತರಾಗಿರುವ ಐಪಿಎಸ್ ಅಧಿಕಾರಿ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಆಗಮನದಿಂದಾಗಿ ಜಿಲ್ಲೆಯ ಕೋಮುವಾದಿ ಹಾಗೂ ಕ್ರಿಮಿನಲ್ ಗಳಿಗೆ ನಡುಕವುಂಟಾಗಿದೆ. ಸರಕಾರದ ನಿರ್ದೇಶನದಂತೆ ಬುಧವಾರ ಸಂಜೆಯೇ ಜಿಲ್ಲೆಗೆ ಗಗಮಿಸಿದ ಎಸ್ಪಿ ಅಣ್ಣಾಮಲೈ ತನ್ನ ವಿಶಿಷ್ಟ ರಫ್ […]

ಬಂಟ್ವಾಳದ ಕ್ರಿಮಿನಲ್ ಗಳ ಅಡ್ಡೆಗೆ ನುಗ್ಗಿದ ರಿಯಲ್ ಸಿಂಗಂ ಎಸ್ಪಿ ಅಣ್ಣಾಮಲೈ Read More »

ಕರಾವಳಿ

ಕಲಾಯಿ ಅಶ್ರಫ್ ಕೊಲೆ ಪ್ರಕರಣ: ಐವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.24. ಕಳೆದ ಮೂರು ದಿನಗಳ ಹಿಂದೆ ಕಲಾಯಿಯ SDPI ವಲಯಾಧ್ಯಕ್ಷರಾದ ಅಶ್ರಫ್ ಅವರನ್ನು ಬೆಂಜನಪದವಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾದ ಪ್ರಕರಣವನ್ನು ಭೇದಿಸಿರುವ ರಾಜ್ಯ ಪೊಲೀಸ್ ಇಲಾಖೆ ಈ ಸಂಬಂಧ 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಅಭಿನ್, ದಿವ್ಯರಾಜ್, ಪವನ್ ಸಂತೋಷ್ ಹಾಗೂ ಶಿವಪ್ರಸಾದ್ ಎಂದು ಗುರುತಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಆರೋಪಿಗಳನ್ನು ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್

ಕಲಾಯಿ ಅಶ್ರಫ್ ಕೊಲೆ ಪ್ರಕರಣ: ಐವರ ಬಂಧನ Read More »

ಕರಾವಳಿ

ಜಿಲ್ಲೆಯ ನೂತನ ಎಸ್ಪಿಯಾಗಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.22. ಜಿಲ್ಲೆಯಲ್ಲಿ ನಡೆದಂತಹ ಅಹಿತಕರ ಬೆಳವಣಿಗೆಗೆ ಸಂಬಂಧಿಸಿದಂತೆ ಜಿಲ್ಲೆಗೆ ನೂತನ ಎಸ್ಪಿಯಾಗಿ ಸರಕಾರದಿಂದ ನೇಮಕವಾದ C.H.ಸುಧೀರ್ ಕುಮಾರ್ ರೆಡ್ಡಿಯವರು ಗುರುವಾರದಂದು ಅಧಿಕಾರ ಸ್ವೀಕರಿಸಿದರು. ಪ್ರಸ್ತುತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದುಕೊಂಡು ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾವಣೆಯಾಗಿರುವಂತಹ ಭೂಷಣ್ ಜಿ. ಬೊರಸೆಯವರು ನೂತನ ಎಸ್ಪಿಯವರಿಗೆ ಅಧಿಕಾರ ಹಸ್ತಾಂತರಿಸಿದರು. 2010ನೇ ಸಾಲಿನ IPS ಅಧಿಕಾರಿಯಾಗಿರುವ ಸುಧೀರ್ ಕುಮಾರ್ ರೆಡ್ಡಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರಿನವರು. ಈ ಹಿಂದೆ ಭಟ್ಕಳದಲ್ಲಿ ಎಎಸ್ಪಿಯಾಗಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಂಡ್ಯದಲ್ಲಿ

ಜಿಲ್ಲೆಯ ನೂತನ ಎಸ್ಪಿಯಾಗಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ Read More »

ಕರಾವಳಿ

ಬಂಟ್ವಾಳಕ್ಕೆ ತಲುಪಿದ ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.22. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಭದ್ರತಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಯವರು ಬುಧವಾರ ತಡರಾತ್ರಿ ಜಿಲ್ಲೆಯ ಬಂಟ್ವಾಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದರು. ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರವನ್ನು ತಡೆಗಟ್ಟಲು ಅಣ್ಣಾಮಲೈರವರು ಅಧಿಕಾರ ವಹಿಸಲಿದ್ದಾರೆ ಎನ್ನುವ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಈ ಬಗ್ಗೆ ಹಲವು ಶಾಂತಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈರವರಿಗೆ ಸ್ವಾಗತವನ್ನೂ ಕೋರಿದ್ದರು. ಆದರೆ ಕೊನೇ ಕ್ಷಣದಲ್ಲಿ ಮಂಡ್ಯ ಎಸ್ಪಿಯಾಗಿದ್ದ C.H. ಸುಧೀರ್ ಕುಮಾರ್ ರೆಡ್ಡಿಯವರನ್ನು ನೇಮಕಗೊಳಿಸಿ

ಬಂಟ್ವಾಳಕ್ಕೆ ತಲುಪಿದ ಎಸ್ಪಿ ಅಣ್ಣಾಮಲೈ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.20. ಈ ಹಿಂದೆ ಉಡುಪಿ ಎಸ್ಪಿಯಾಗಿ ಪುಂಡು ಪೋಕರಿಗಳ ಹೆಡೆಮುರಿ ಕಟ್ಟಿದ್ದ ಪ್ರಸ್ತುತ ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ನೇಮಕಗೊಳ್ಳುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳನ್ನು ತಡೆಯಲು ಹಾಗೂ ನೈಜ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿಕೊಂಡಿದ್ದ ವೀಡಿಯೋ ಇದೀಗ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ…? Read More »

ಕರಾವಳಿ

ಚಿಕ್ಕಮಗಳೂರು: ಮೂವರು ಶಂಕಿತ ನಕ್ಸಲರು ಮುಖ್ಯವಾಹಿನಿಗೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.5. ಜಿಲ್ಲೆಯ ಕಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು ಎನ್ನಲಾದ ಮೂವರು ಶಂಕಿತ ನಕ್ಸಲರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಎಡಪಂಥೀಯ ಶರಣಾಗತ ಸಮಿತಿಯ ಎದುರು ಸಮಾಜದ ಮುಖ್ಯವಾಹಿನಿ ಪ್ರವೇಶಿಸಿದ್ದಾರೆ. ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಳುವಳ್ಳಿ ಗ್ರಾಮದ ಜರಿಮನೆ ಎಂಬಲ್ಲಿನ ಕನ್ಯಾಕುಮಾರಿ ಅಲಿಯಾಸ್ ಸುವರ್ಣ (30), ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಚೆನ್ನಮ್ಮ ಅಲಿಯಾಸ್ ಸುಮಾ(32) ಮತ್ತು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಕಂಟ್ರಕ್ಲಬ್ ರಸ್ತೆಯ ಶಿವು ಅಲಿಯಸ್ ಜ್ಞಾನದೇವು(31)

ಚಿಕ್ಕಮಗಳೂರು: ಮೂವರು ಶಂಕಿತ ನಕ್ಸಲರು ಮುಖ್ಯವಾಹಿನಿಗೆ Read More »

ಕರ್ನಾಟಕ
Scroll to Top