alankar

ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಠಾಣಾ ವ್ಯಾಪ್ತಿಯ ಅಲಂಕಾರು ಎಂಬಲ್ಲಿ ಶಾಲೆಗೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿರುವುದಾಗಿ ವಿದ್ಯಾರ್ಥಿಯ ತಂದೆ ಸೋಮವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿಗೆ ಸಮೀಪದ ಅಲಂಕಾರು ದುರ್ಗಾಂಬಾ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿ ಆಲಂಕಾರು ಗ್ರಾಮದ ಉಜುರ್ಲಿ ನಿವಾಸಿ ಗೋಪಾಲಕೃಷ್ಣ ಉಪಾಧ್ಯಾಯ ಎಂಬವರ ಪುತ್ರ ಶಿವಕುಮಾರ್ ಉಪಾಧ್ಯಾಯ (15) ಕಾಣೆಯಾದ ವಿದ್ಯಾರ್ಥಿ. ಈತ ಶನಿವಾರದಂದು ಶಾಲೆಗೆಂದು ತೆರಳಿದ್ದು, ನಂತರ ನಾಪತ್ತೆಯಾಗಿದ್ದಾನೆನ್ನಲಾಗಿದೆ. ಮನೆಯಲ್ಲಿದ್ದು ಓದಲು ಮನಸ್ಸು ಬರುವುದಿಲ್ಲ. ನನ್ನ […]

ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ Read More »

ಕರಾವಳಿ

ಆಲಂಕಾರು ವಿಶೇಷ ಗ್ರಾಮ ಸಭೆ ► ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಆ.31. ಒಂದೆಡೆ ಅಬಕಾರಿ ಅಧಿಕಾರಿಗಳು ಕಾನೂನಿನ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದರೆ ಇನ್ನೊಂದೆಡೆ ಮದ್ಯದಂಗಡಿ ಮುಚ್ಚಿಸುವಂತೆ ಏರು ಧ್ವನಿಯಲ್ಲಿ ಆಗ್ರಹಿಸಿದ ನಾಗರೀಕರು ಈ ಮದ್ಯೆ ಜಿಲ್ಲಾಧಿಕಾರಿಗೆ ಗ್ರಾಮಸ್ಥರಿಂದ ಎಚ್ಚರಿಕೆಯ ನಿರ್ಣಯ ಅಂಗಿಕಾರ ವಾಗ್ವದ, ಆಣೆಪ್ರಮಾಣದ ಸನ್ನಿವೇಶ ಆಲಂಕಾರು ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಬುಧವಾರ ವ್ಯಕ್ತವಾಯಿತು. ಸಭೆಯು ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಬಾರ್ಕುಳಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಕಾರು ಪೇಟೆಯಲ್ಲಿ ಗ್ರಾಮಸ್ಥರ ಆಕ್ಷೇಪಗಳ

ಆಲಂಕಾರು ವಿಶೇಷ ಗ್ರಾಮ ಸಭೆ ► ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ Read More »

ಕರಾವಳಿ

ರಸ್ತೆ ಬದಿಯ ಮೀನು ಮಾರಾಟ ಗೊಂದಲ ► ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಮೀನು ಮಾರಾಟಗಾರ

(ನ್ಯೂಸ್ ಕಡಬ) newskadaba.com ಕಡಬ, ಆ.25, ಆಲಂಕಾರಿನ ರಾಜ್ಯ ಹೆದ್ದಾರಿಬದಿಯಲ್ಲಿ ಹಸಿಮೀನು ಮಾರಾಟ ಗೊಂದಲ ಇನ್ನೂ ಜೀವಂತವಾಗಿದ್ದು ಗುರುವಾರ ರಸ್ತೆ ಬದಿಯಲ್ಲಿ ಹಸಿ ಮೀನು ಮಾರಾಟ ಮಾಡುವುದನ್ನು ತೆರವು ಮಾಡಲು ಬಂದ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಬರಿಗೈಯಲ್ಲಿ ವಾಪಾಸ್ಸಾದ ಘಟನೆ ನಡೆದಿದೆ. ಮೀನು ಮಾರಾಟಗಾರ ಹಾಗೂ ಕೆಲವರು ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಪರಿಣಾಮ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ಸಾಗಿರುವುದರಿಂದ ಪ್ರಕರಣ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆಲಂಕಾರು ಪೇಟೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ

ರಸ್ತೆ ಬದಿಯ ಮೀನು ಮಾರಾಟ ಗೊಂದಲ ► ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಮೀನು ಮಾರಾಟಗಾರ Read More »

ಕರಾವಳಿ

ಹಿಂಜಾವೇ ಆಲಂಕಾರು ಘಟಕಾಧ್ಯಕ್ಷರಾಗಿ ಜನಾರ್ಧನ ಕಯ್ಯಪೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಹಿಂದೂ ಜಾಗರಣ ವೇದಿಕೆ ಆಲಂಕಾರು ಘಟಕ ರಚಿಸಲಾಗಿದ್ದು ಇದರ ಅಧ್ಯಕ್ಷರಾಗಿ ಜನಾರ್ದನ ಕಯ್ಯಪೆ, ಸಂಚಾಲಕರಾಗಿ ಧನಂಜಯ ಕಜೆ ನೇಮಕಗೊಂಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಸಹಸಂಚಾಲಕರಾಗಿ ಮಲ್ಲೇಶ್ ಆಲಂಕಾರು ಇವರನ್ನು ನೇಮಕ ಮಾಡಲಾಗಿದೆ. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಗುರುವಾರದಂದು ನಡೆದ ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ಬೈಠಕ್ ನಲ್ಲಿ ನೂತನ ಘಟಕ ರಚಿಸಲಾಯಿತು. ಕಾರ್ಯದರ್ಶಿಯಾಗಿ ಮನೋಹರ ಬಾರಡ್ಕ,

ಹಿಂಜಾವೇ ಆಲಂಕಾರು ಘಟಕಾಧ್ಯಕ್ಷರಾಗಿ ಜನಾರ್ಧನ ಕಯ್ಯಪೆ ಆಯ್ಕೆ Read More »

ಕರಾವಳಿ

ಆಲಂಕಾರು: ಅಕ್ರಮ ಮದ್ಯ ಮಾರಾಟ ಪ್ರಕರಣ ► ಬೈಕ್, ಮದ್ಯದೊಂದಿಗೆ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಕಡಬ, ಜು.25. ಠಾಣಾ ವ್ಯಾಪ್ತಿಯ ಆಲಂಕಾರು ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಆಲಂಕಾರು ಗ್ರಾಮ ಪಂಚಾಯಿತಿಯಿಂದ ನೀಡಿದ ದೂರಿನಂತೆ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ಒರ್ವನನ್ನು ಬಂಧಿಸಿ ಬೈಕ್ ಹಾಗೂ 5ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ತಡರಾತ್ರಿ ಆಲಂಕಾರಿನಲ್ಲಿ ನಡೆದಿದೆ. ಪೆರಾಬೆ ಗ್ರಾಮದ ಸುರುಳಿ ಮೋನಪ್ಪ ಗೌಡರ ಪುತ್ರ ಕಿಟ್ಟಣ್ಣ ಗೌಡ(53ವ) ಬಂಧಿತ ಆರೋಪಿಯಾಗಿದ್ದು, ಈತ ಆಲಂಕಾರು ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಗಳು

ಆಲಂಕಾರು: ಅಕ್ರಮ ಮದ್ಯ ಮಾರಾಟ ಪ್ರಕರಣ ► ಬೈಕ್, ಮದ್ಯದೊಂದಿಗೆ ಆರೋಪಿ ಸೆರೆ Read More »

ಕರಾವಳಿ

ಆಲಂಕಾರು: ಮದ್ಯ ಸೇವನೆಗೆ ಅವಕಾಶ ನೀಡಿದ ಅಂಗಡಿಗಳಿಗೆ ದಾಳಿ ► ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.19. ತಮ್ಮ ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಆಲಂಕಾರಿನ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿರುವ ಕಡಬ ಪೊಲೀಸರು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಆಲಂಕಾರು ಗ್ರಾಮದ ಸುರುಳಿ ಬಳಿಯ ಲಕ್ಷ್ಮೀ ಚಿಕನ್ ಸೆಂಟರ್ ನ ರವೀಂದ್ರ, ಆಲಂಕಾರು ಪೇಟೆಯಲ್ಲಿರುವ ಮಯೂರ ಎಂಟರ್ ಪ್ರೈಸಸ್ ನ ವಿನಯ.ಕೆ, ಮತ್ತು ಆಲಂಕಾರು ವರ್ಕ್ ಶಾಪಿನ ತೆರೆದ ಶೆಡ್ನಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ರಾಘವೇಂದ್ರ ಗೌಡ ಬಂಧಿತ

ಆಲಂಕಾರು: ಮದ್ಯ ಸೇವನೆಗೆ ಅವಕಾಶ ನೀಡಿದ ಅಂಗಡಿಗಳಿಗೆ ದಾಳಿ ► ಮೂವರು ಆರೋಪಿಗಳ ಬಂಧನ Read More »

ಕರಾವಳಿ

ಆಲಂಕಾರು ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು: ಗಣಕ ಯಂತ್ರ ಘಟಕ ಉದ್ಟಾಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ಕಂಪ್ಯುಟರ್ ಶಿಕ್ಷಣವು ಪುರಕವಾಗಲಿದೆ ಎಂದು ಕಾರ್ಪೋರೇಟ್ ಟ್ರೈನರ್ ನಿರಂಜನ್ ರೈ ಹೇಳಿದರು. ಅವರು ಶ್ರೀ ದುರ್ಗಾಂಬ ಪದವಿಪುರ್ವ ವಿದ್ಯಾಲಯದ ಗಣಕ ಯಂತ್ರ ಘಟಕವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭವಿಷ್ಯದ ಉನ್ನತ ಜೀವನಕ್ಕೆ ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಕಂಪ್ಯುಟರ್ ಶಿಕ್ಷಣವು ಇಂದಿನ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳ ಮುಂದಿನ ವೃತ್ತಿಪರ ಜೀವನಕ್ಕೆ ವಿದ್ಯಾರ್ಥಿ ದೆಸೆಯಲ್ಲಿಯೇ ಗಣಕ ಯಂತ್ರದ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ನ್ಯಾಯವಾದಿ ಮನೋಹರ್ ಮಾತನಾಡಿ,

ಆಲಂಕಾರು ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು: ಗಣಕ ಯಂತ್ರ ಘಟಕ ಉದ್ಟಾಟನೆ Read More »

ಕರಾವಳಿ

ಆಲಂಕಾರು: ಅಪಘಾತದ ಗಾಯಾಳು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು.15. ಏಳು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೋಮಾವಸ್ಥೆಯಲ್ಲಿದ್ದ ಗಾಯಳು ಶುಕ್ರವಾರ ತಡ ರಾತ್ರಿ ಸಾವನ್ನಪ್ಪಿದ ಘಟನೆ ಆಲಂಕಾರಿನಲ್ಲಿ ನಡೆದಿದೆ. ಆಲಂಕಾರು ಗ್ರಾಮದ ನೆಕ್ಕಿಲಾಡಿ ನೋಣಯ್ಯ ಆಚಾರಿ (75) 2016ರ ಡಿಸೆಂಬರ್ 4ರಂದು ಆಲಂಕಾರು ಪೇಟೆಯಲ್ಲಿ ರಸ್ತೆ ದಾಟುವ ಸಂಧರ್ಭದಲ್ಲಿ ಕಡಬ ಕಡೆಯಿಂದ ಬಂದ ದ್ವಿ-ಚಕ್ರ ವಾಹನವೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಕೋಮಾವಸ್ಥೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದರು. ಸುಮಾರು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಚಿಕಿತ್ಸಗೆ

ಆಲಂಕಾರು: ಅಪಘಾತದ ಗಾಯಾಳು ಮೃತ್ಯು Read More »

ಕರಾವಳಿ
Scroll to Top