aithuru

ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.30. ಐತ್ತೂರು ಗ್ರಾಮ ಪಂಚಾಯತ್ ಜಮಾಬಂದಿ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಕೆ.ಯವರ ಅಧ್ಯಕ್ಷತೆಯಲ್ಲಿ  ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ತಾಲೂಕು ಯೋಜನಾಧಿಕಾರಿ ಗಣಪತಿ ಭಟ್ ಜಮಾಬಂದಿ ಸಭೆಯ ಅಧಿಕಾರಿಯಾಗಿದ್ದರು. 2016-17ನೇ ವಾರ್ಷಿಕ ಲೆಕ್ಕಪತ್ರ ಹಾಗೂ ವಿವಿಧ ದಾಖಲೆ ಪರಿಶೀಲನೆಯ ಕುರಿತು ಜಮಾಬಂದಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಬಳಿಕ ವಿವಿಧ ಕಾಮಗಾರಿಗಳಾದ ಬಜಕೆರೆ ರಸ್ತೆ ಕಾಂಕ್ರೀಟೀಕರಣ, ಭ್ರಾಂತಿಕಟ್ಟೆ-ಕೋಡಿಂಕಿರಿ ರಸ್ತೆಯ ಬಜಕೆರೆ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ, ಹಾಗೂ ಕಲ್ಲಾಜೆ-ಅಂತಿಬೆಟ್ಟು ರಸ್ತೆಯ ಕಲ್ಲಾಜೆ […]

ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ Read More »

ಕರಾವಳಿ

ಐತ್ತೂರು: ಸುಳ್ಯ-ನೇಲ್ಯಡ್ಕ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.18. ಐತ್ತೂರು ಗ್ರಾಮದ ಸುಳ್ಯ-ನೇಲ್ಯಡ್ಕ ಪರಿಶಿಷ್ಠ ಜಾತಿಯ ಕಾಲೋನಿ ರಸ್ತೆಗೆ ತಾ.ಪಂ. ಸದಸ್ಯರ 2017-18ರ ರೂ 1 ಲಕ್ಷ  ಅನುದಾನದಲ್ಲಿ ಕಾಂಕ್ರೀಟೀಕರಣಕ್ಕೆ ತಾ.ಪಂ.ಸದಸ್ಯೆ ಪಿ.ವೈ ಕುಸುಮರವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮರ್ದಾಳ ಗ್ರಾ,ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಎ.ಪಿ.ಎಂ.ಸಿ. ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಮರ್ದಾಳ ಗ್ರಾ.ಪಂ.ಸದಸ್ಯ ಹರೀಶ್ ಕೋಡಂದೂರು, ನೇಲ್ಯಡ್ಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಮಿನಿ ಈಶೋಫಿಲಿಪ್, ಗುತ್ತಿಗೆದಾರ ಅಭಿಲಾಷ್ ಬಿಳಿನೆಲೆ, ಪತ್ರಿಕಾ ವಿತರಕ ರಮೇಶ್

ಐತ್ತೂರು: ಸುಳ್ಯ-ನೇಲ್ಯಡ್ಕ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ Read More »

ಕರಾವಳಿ

ಕಡಬ: ಶ್ರೀಲಂಕಾ ಹಾಗೂ ತಮಿಳು ನಿರಾಶ್ರಿತರಿಗೆ ನಿವೇಶನ ಕಾದಿರಿಸಲು ಮನವಿ ► ಸೂಕ್ತ ಕ್ರಮದ ಭರವಸೆ ನೀಡಿದ ಶಾಸಕ ಎಸ್. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ,ಅ.7. ಐತ್ತೂರು ಗ್ರಾ.ಪಂ. ವ್ಯಾಪ್ತಿಯ ತಮಿಳು ನಿರಾಶ್ರಿತರಿಗೆ ಕಾದಿರಿಸದ ಜಾಗವನ್ನು ಫಲಾನುಭವಿಗಳಿಗೆ ನೀಡುವಂತೆ ಹಾಗೂ ಉಳಿದ ನಿರಾಶ್ರಿತರಿಗೆ ನಿವೇಶನ ಕಾದಿರಿಸುವಂತೆ ಮತ್ತು ಬಿಪಿಎಲ್ ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ತಮಿಳು ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಸುಳ್ಯ ಶಾಸಕರಿಗೆ ಹಾಗೂ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್.ಕೆ., ಐತ್ತೂರು ಗ್ರಾಮದ ಕೋಕಳ ಎಂಬಲ್ಲಿ ಶ್ರೀಲಂಕಾ ನಿರಾಶ್ರೀತರಿಗೆ 3.69ಎಕ್ರೆ ಜಾಗವನ್ನು ಎಲ್ಎನ್ಡಿ/ಸಿಆರ್/130/1998-99ರಲ್ಲಿ ಕಾದಿರಿಸಲಾಗಿದೆ.

ಕಡಬ: ಶ್ರೀಲಂಕಾ ಹಾಗೂ ತಮಿಳು ನಿರಾಶ್ರಿತರಿಗೆ ನಿವೇಶನ ಕಾದಿರಿಸಲು ಮನವಿ ► ಸೂಕ್ತ ಕ್ರಮದ ಭರವಸೆ ನೀಡಿದ ಶಾಸಕ ಎಸ್. ಅಂಗಾರ Read More »

ಕರಾವಳಿ

ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ► ಪ್ರತಿ ಕುಟುಂಬಗಳು ಶೌಚಾಲಯ ಹೊಂದುವುದು ಕಡ್ಡಾಯ

(ನ್ಯೂಸ್ ಕಡಬ) newskadaba.com ಕಡಬ,ಸೆ.29. ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ.ಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಯೋಜನೆ ಹಾಗೂ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಲು ಬಾಕಿ ಇರುವ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವಂತೆ ಪಂಚಾಯತ್ನಿಂದ ನೋಟಿಸ್ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಗಾಂಧೀ ಜಯಂತಿ ದಿನಾಚರಣೆಯ ದಿನವಾದ ಅ.2ರಂದು ಸ್ವಚ್ಛ ಸಂಕಲ್ಪ ಕಾರ್ಯಕ್ರಮ ನಿಮಿತ್ತ ಗ್ರಾಮ ಪಂಚಾಯತ್ ವಠಾರದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸುವ

ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ► ಪ್ರತಿ ಕುಟುಂಬಗಳು ಶೌಚಾಲಯ ಹೊಂದುವುದು ಕಡ್ಡಾಯ Read More »

ಕರಾವಳಿ

ಕೊಣಾಜೆಯಲ್ಲಿ ಆನೆಗಳ ದಾಳಿ ► ಭತ್ತದ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಕಡಬ,ಸೆ.02, ಕಳೆದ ನಾಲ್ಕು ದಿನಗಳಿಂದ ಕೊಣಾಜೆ ಗ್ರಾಮದ ನೆಕಾೖಜೆ ವ್ಯಾಪ್ತಿಯಲ್ಲಿ ನಿರಂತರ ಆನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಭತ್ತದ ಕೃಷಿ ನಾಶವಾಗಿದ ಬಗ್ಗೆ ವರದಿಯಾಗಿದೆ. ಕೊಣಾಜೆ ಗ್ರಾಮದ ನೆಕಾೖಜೆ ನಿವಾಸಿ, ಐತ್ತೂರು ಗ್ರಾ.ಪಂ.ಮಾಜಿ ಸದಸ್ಯ ಲೋಕಯ್ಯ ಗೌಡರ ಗದ್ದೆಗೆ ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ದಾಳಿ ನಡೆಸುತ್ತಿದ್ದು ಅಪಾರ ಪ್ರಮಾಣದ ಭತ್ತದ ಕೃಷಿ ನಾಶಗೊಳಿಸಿವೆ ಎಂದು ವರದಿಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಲೋಕಯ್ಯ ಗೌಡರು, ಕಳೆದ ನಾಲ್ಕು ದಿನಗಳಿಂದ ರಾತ್ರಿ

ಕೊಣಾಜೆಯಲ್ಲಿ ಆನೆಗಳ ದಾಳಿ ► ಭತ್ತದ ಕೃಷಿ ನಾಶ Read More »

ಕರಾವಳಿ
Scroll to Top