ಭೀಕರ ರಸ್ತೆ ಅಪಘಾತ ►ಜಂಪ್ ಮಾಡಿದ ಸ್ಕಾರ್ಪಿಯೋ ಇನ್ನೊಂದು ರಸ್ತೆಯಲ್ಲಿ ಬರುತ್ತಿದ್ದ ಲಾರಿಗೆ ಢಿಕ್ಕಿ ► ಇಬ್ಬರ ದುರ್ಮರಣ
(ನ್ಯೂಸ್ ಕಡಬ) newskadaba.com ಕಡಬ,ಸೆ.01, ಬೆಂಗಳೂರು: ಸ್ಕಾರ್ಪಿಯೋ ಹಾಗೂ ಕ್ಯಾಂಟರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಏರ್ ಪೋರ್ಟ್ ಬಳಿ ಶುಕ್ರವಾರ ಮಧ್ಯಾಹ್ನ ವರದಿಯಾಗಿದೆ. ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಶ್ವತ್ ಬಾಬು ಹಾಗೂ ರಾಜು ಎಂಬುವುದಾಗಿ ಗುರುತಿಸಲಾಗಿದ್ದು. ಬೆಂಗಳೂರು ಏರ್ ಪೋರ್ಟ್ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ಹುಣಸಮಾರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇನ್ನೊಂದು ರಸ್ತೆಗೆ […]


