adyar

ಅಡ್ಯಾರ್: ಭೀಕರ ಸರಣಿ ಅಪಘಾತ ► ಓರ್ವ ಮೃತ್ಯು, ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.27. ಎರಡು ಕಾರುಗಳು, ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ನಡೆದ ಸರಣಿ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಗರದ ಹೊರವಲಯದ ಅಡ್ಯಾರಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಮೃತ ಯುವಕನನ್ನು ಇಲೆಕ್ಟ್ರೀಷಿಯನ್ ವೃತ್ತಿಯಲ್ಲಿದ್ದ ಫಾರೂಕ್(26) ಎಂದು ಗುರುತಿಸಲಾಗಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ವಾಹನಗಳು ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಣ್ಣೂರು ಮಸೀದಿ ಬಳಿ ತಲುಪಿದಾಗ ಹನೀಫ್ ಎಂಬವರು ಚಲಾಯಿಸುತ್ತಿದ್ದ ಕಾರು ಉಳಿದ ವಾಹನಗಳಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. […]

ಅಡ್ಯಾರ್: ಭೀಕರ ಸರಣಿ ಅಪಘಾತ ► ಓರ್ವ ಮೃತ್ಯು, ಮೂವರಿಗೆ ಗಾಯ Read More »

ಕರಾವಳಿ

ನೇತ್ರಾವತಿ ನದಿಗಿಳಿದ ಮೂವರು ನೀರುಪಾಲು ► ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು ಸೆ.4. ಸ್ನಾನ ಮಾಡಲೆಂದು ನದಿಗಿಳಿದ ಮೂವರು ವಿದ್ಯಾರ್ಥಿಗಳು ನಿರುಪಾಲಾದ ಘಟನೆ ಮಂಗಳೂರು ಸಮೀಪದ ಇನೋಳಿ ನಡುಗುಡ್ಡೆ ಎಂಬಲ್ಲಿ ಸೋಮವಾರ ಅಪರಾಹ್ನ ನಡೆದಿದೆ. ನೀರುಪಾಲಾದವರನ್ನು ಮಂಗಳೂರಿನ ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಚಿತ್ರದುರ್ಗ ಮೂಲದ ಶ್ರೀರಾಮ್(21), ವಿಖಿಲ್(22) ಹಾಗೂ ಬಿಹಾರ ಮೂಲದ ಶುಭಂ(21) ಎಂದು ಗುರುತಿಸಲಾಗಿದೆ. ಈ ಪೈಕಿ ವಿಖಿಲ್ ಅವರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು.

ನೇತ್ರಾವತಿ ನದಿಗಿಳಿದ ಮೂವರು ನೀರುಪಾಲು ► ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು Read More »

ಕರಾವಳಿ
Scroll to Top