Accident

ಬಜ್ಪೆ: ಬೆಳಗ್ಗಿನ ಜಾವ ಬೈಕ್‌ಗೆ ಢಿಕ್ಕಿ ಹೊಡೆದ ಮಿನಿ ಬಸ್ ► ದೇವಸ್ಥಾನಕ್ಕೆ ತೆರಳುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕರು

(ನ್ಯೂಸ್ ಕಡಬ) newskadaba.com ಬಜ್ಪೆ, ಆ.25. ಗಣೇಶ್ ಚತುರ್ಥಿ ಪ್ರಯುಕ್ತ ಪೂಜೆಗೆಂದು ಸುರತ್ಕಲ್ ನಿಂದ ಕಟೀಲು ದೇವಸ್ಥಾನಕ್ಕೆ ತೆರಳುತ್ತಿದ್ದ ಯುವಕರಿದ್ದ ಬೈಕ್ ಗೆ ಬಜ್ಪೆ ಚೆಕ್‌ ಪೋಸ್ಟ್ ಬಳಿ ONGC ಕಂಪೆನಿಯ ಮಿನಿ ಬಸ್ಸೊಂದು ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಲ್ಲಿ ಕೈ, ಕಾಲು ಮುರಿತಕ್ಕೊಳಗಾಗಿ ಮತ್ತು ಎದೆಗೆ ತೀವ್ರ ತರದ ಏಟು ಬಿದ್ದು ಅರೆ ಪ್ರಜ್ಞಾವಸ್ತೆಯಲ್ಲಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರ ಜಗದೀಶ್ ಹಾಗೂ ಸಹ ಸವಾರನನ್ನು ಆಸ್ಪತ್ರೆಗೆ […]

ಬಜ್ಪೆ: ಬೆಳಗ್ಗಿನ ಜಾವ ಬೈಕ್‌ಗೆ ಢಿಕ್ಕಿ ಹೊಡೆದ ಮಿನಿ ಬಸ್ ► ದೇವಸ್ಥಾನಕ್ಕೆ ತೆರಳುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕರು Read More »

ಕರಾವಳಿ

ಭೀಕರ ರಸ್ತೆ ಅಪಘಾತ  ► ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ರಾಮನಗರ, ಆ.25, ಓಮಿನಿ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಸಾಸಲಪುರದ ರಾಯರದೊಡ್ಡಿ ಬಳಿ ಶುಕ್ರವಾರ ನಡೆದಿದೆ.   ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರೆಲ್ಲರೂ ಮೈಸೂರಿನವರು ಎಂದು ಹೇಳಲಾಗಿದೆ. ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಭೀಕರ ರಸ್ತೆ ಅಪಘಾತ  ► ಮೂವರು ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಲಾರಿಗೆ ಢಿಕ್ಕಿಯಾದ ಕಾರು: ಕಿರುತೆರೆ ನಟಿ, ಸಹ ನಟ ಮೃತ್ಯು ► ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಆಗಮಿಸುತ್ತಿದ್ದ ನಟರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.24. ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಿರುತುರೆ ನಟಿ ಹಾಗೂ ಸಹನಟ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ನಾಲ್ವರು ಸಹನಟರು ಗಾಯಗೊಂಡ ಘಟನೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಲ್ಯಾಂಕೋ ಟೋಲ್‌ ರಸ್ತೆಯ ಸೋಲೂರು ಬಳಿ ಬುಧವಾರ ತಡರಾತ್ರಿ ನಡೆದಿದೆ. ಮಹಾನದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮತ್ತು ರು. ಮಧುಬಾಲ, ತ್ರಿವೇಣಿ ಸಂಗಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟಿ ರಚನಾ(23) ಹಾಗೂ ಸಹ ನಟ ಜೀವನ್‌ ಮೃತಪಟ್ಟವರು.

ಲಾರಿಗೆ ಢಿಕ್ಕಿಯಾದ ಕಾರು: ಕಿರುತೆರೆ ನಟಿ, ಸಹ ನಟ ಮೃತ್ಯು ► ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಆಗಮಿಸುತ್ತಿದ್ದ ನಟರು Read More »

ಕರ್ನಾಟಕ

ಸ್ಕಾರ್ಪಿಯೋ ಕಾರಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿಯ ಅಪಹರಣ ► ಚಾಲಕನ ಕೈಗೆ ಕಚ್ಚಿ ಚಲಿಸುವ ಕಾರಿನಿಂದ ಹೊರಕ್ಕೆ ಜಿಗಿದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಮೈಸೂರು, ಆ.23. ಇಂಜಿನಿಯರಿಂಗ್‌ ವಿದ್ಯಾರ್ಥಿನಿಯನ್ನು ಹಾಡುಹಗಲೇ ಕಾರಿನಲ್ಲಿ ಅಪಹರಣಕ್ಕೆ ವಿಫಲ ಯತ್ನ ನಡೆಸಲಾಗಿದ್ದು, ವಿದ್ಯಾರ್ಥಿನಿ ಕಾರು ಚಾಲಕನ ಕೈಗೆ ಕಚ್ಚಿ ತಪ್ಪಿಸಿಕೊಂಡ ಘಟನೆ ಇಲ್ಲಿನ ನಂಜನಗೂಡಿನಲ್ಲಿ ಬುಧವಾರದಂದು ನಡೆದಿದೆ. ಚಾಮರಾಜನಗರದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮಂಡ್ಯ ಮೂಲದ ರಾಧಾ ಅಪಹರಣಕ್ಕೆ ಒಳಗಾಗಿ ನಂತರ ತಪ್ಪಿಸಿಕೊಂಡು ಬಂದಿರುವ ಯುವತಿ. ರಾಧಾ ತನ್ನ ಪರಿಚಯಸ್ಥರ ಭೇಟಿಗೆಂದು ನಂಜನಗೂಡಿಗೆ ಬಂದಿದ್ದು, ಹಿಂತಿರುಗಲು ನಂಜನಗೂಡಿನ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಲ್ಲೆ ಇದ್ದ ಅಪರಿಚಿತ ಮಹಿಳೆಯು ರಾಧಾ ಜೊತೆ ಮಾತುಕತೆ ಆರಂಭಿಸಿದ್ದಾಳೆ.

ಸ್ಕಾರ್ಪಿಯೋ ಕಾರಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿಯ ಅಪಹರಣ ► ಚಾಲಕನ ಕೈಗೆ ಕಚ್ಚಿ ಚಲಿಸುವ ಕಾರಿನಿಂದ ಹೊರಕ್ಕೆ ಜಿಗಿದ ವಿದ್ಯಾರ್ಥಿನಿ Read More »

ಕರ್ನಾಟಕ

ಅಪರಿಚಿತ ಲಾರಿ ಢಿಕ್ಕಿ ► ಸ್ಥಳದಲ್ಲೇ ಐವರ ಮೃತ್ಯು

(ನ್ಯೂಸ್ ಕಡಬ) newskadaba.com ಹೈದರಾಬಾದ್, ಆ.23, ಅಪರಿಚಿತ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬೆನ್ದಾರದಲ್ಲಿ ನಡೆದಿದೆ. ಘಟನೆಯಲ್ಲಿ ಲೀಮುಗುಡ ಜಿಲ್ಲೆಯ ಮೊರೋಲೆ ಸಂತೋಷ್(18) ಹಾಗೂ ಅಡೇ ತಿರುಪತಿ(22). ಅಗರ್‍ವಾಡದಲ್ಲಿ ವಾಸಿಸುತ್ತಿದ್ದ ವೇದ್‍ಮ ಅಂಭರಾವ್(25), ಕೇರಮೇರಿ ಮಂಡಲ್‍ನ ಜಾರಿ ಜಿಲ್ಲೆಯ ಲೇಂದಗುಡ(14) ಸಾವನ್ನಪ್ಪಿರುವ ವ್ಯಕ್ತಿಗಳು ಎಂದು ವಾನ್‍ಕಿಡಿ ಪೊಲೀಸರು ತಿಳಿಸಿದ್ದಾರೆ. ವೇಗವಾಗಿ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ

ಅಪರಿಚಿತ ಲಾರಿ ಢಿಕ್ಕಿ ► ಸ್ಥಳದಲ್ಲೇ ಐವರ ಮೃತ್ಯು Read More »

ಕರ್ನಾಟಕ

ಭೀಕರ ರಸ್ತೆ ಅಪಘಾತ ► ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.23, ಕ್ವಾಲಿಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮಖಾಮುಖಿ ಢಿಕ್ಕಿಯಾಗಿ ಕ್ವಾಲಿಸ್‍ ನಲ್ಲಿದ್ದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ಬಸವನಪುರ ಗೇಟ್ ಬಳಿ ಬುಧವಾರ ಮುಂಜಾನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು ಪತ್ತೆಯಾಗಿಲ್ಲ. ಉಳಿದಂತೆ ನಾಗರಾಜು, ಆನಂದ, ಪ್ರಭುಲಿಂಗದೇವರು ಎಂಬವರು ಗಾಯಗೊಂಡಿದ್ದಾರೆ. ಕ್ವಾಲಿಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಜ್ಯೋತಿಷಿಗಳು ಎಂದು ಹೇಳಲಾಗ್ತಿದೆ. ಬುಧವಾರ ಬೆಳಗ್ಗೆ ಕೊಳ್ಳೆಗಾಲದಿಂದ ಬೆಂಗಳೂರಿನ ಕಡೆ ತೆರಳುತ್ತಿದ್ದ ಕ್ವಾಲಿಸ್‍ ಹಾಗೂ

ಭೀಕರ ರಸ್ತೆ ಅಪಘಾತ ► ಇಬ್ಬರ ದುರ್ಮರಣ Read More »

ಕರ್ನಾಟಕ

ಅಪರಿಚಿತ ವಾಹನ ಡಿಕ್ಕಿ ► ಅಮಾವಾಸ್ಯೆ ಪೂಜೆಗೆಂದು ಹೊರಟ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಆ .21, ಅಮಾವಾಸ್ಯೆ ಪ್ರಯುಕ್ತ ಪೂಜೆ ಸಲ್ಲಿಸಲು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಹೊರಟಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರು ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವರನ್ನು ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯ ನಿವಾಸಿಯಾದ ನಿವೃತ್ತ ಶಿಕ್ಷಕ ತಿಮ್ಮಯ್ಯ ಅವರ ಪತ್ನಿ (54) ಸುಧಾ ಎಂದು ಗುರುತಿಸಲಾಗಿದೆ. ಸುಧಾರವರು ಅಮವಾಸ್ಯೆ ಪೂಜೆ ಸಲ್ಲಿಸಲು ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಮದ್ದೂರಮ್ಮ ದೇವಾಲಯಕ್ಕೆ ಹೊರಟಿದ್ದರು. ಈ ವೇಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ

ಅಪರಿಚಿತ ವಾಹನ ಡಿಕ್ಕಿ ► ಅಮಾವಾಸ್ಯೆ ಪೂಜೆಗೆಂದು ಹೊರಟ ಮಹಿಳೆ ಮೃತ್ಯು Read More »

ಕರಾವಳಿ

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .21, ಚಲಿಸುತ್ತಿದ್ದ ಕಾರ್‍ಗೆ ಬಿಎಂಟಿಸಿ ಬಸ್ಸೊಂದು ಡಿಕ್ಕಿ ಹೊಡೆದುದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಂಗಳೂರಿನ ನಾಯಂಡನಹಳ್ಳಿ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೈಸೂರು ರಸ್ತೆ ಕಡೆಗೆ ತೆರಳುತಿದ್ದ ಕಾರಿಗೆ ಬಿಎಂಟಿಸಿ ಬಸ್ ನಾಯಂಡನಹಳ್ಳಿ ಜಂಕ್ಷನ್ ಬಳಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಿಂದಾಗಿ ಅದೃಷ್ಟವಶಾತ್ ಕಾರ್ ಚಾಲಕ ಕೀರ್ತಿ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ Read More »

ಕರ್ನಾಟಕ

ಕೊಯಿಲ: ಜೀಪು – ಕಾರು ಢಿಕ್ಕಿ ► ಆರು ಮಂದಿಗೆ ಗಾಯ, ಜೀಪು ಪಲ್ಟಿ

(ನ್ಯೂಸ್ ಕಡಬ) newskadaba.com ಕೊಯಿಲ, ಆ.20. ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಫಾರಂ ಬಳಿ ಜೀಪು ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದ ಆರು ಪ್ರಯಾಣಿಕರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ‌ ರಭಸಕ್ಕೆ ಜೀಪು ಪಲ್ಟಿಯಾಗಿದ್ದು, ರಸ್ತೆಗಡ್ಡವಾಗಿ ಬಿದ್ದಿದೆ.

ಕೊಯಿಲ: ಜೀಪು – ಕಾರು ಢಿಕ್ಕಿ ► ಆರು ಮಂದಿಗೆ ಗಾಯ, ಜೀಪು ಪಲ್ಟಿ Read More »

ಕರಾವಳಿ

ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಆ.19. ಠಾಣಾ ವ್ಯಾಪ್ತಿಯ ಎರ್ಮಾಳು ರಾಷ್ಟ್ರೀಯ ಹೆದ್ದಾರಿಯ ಸಮೀಪದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿಗೆ ಮೀನು ಸಾಗಾಟದ ಟೆಂಪೊ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ‌. ಮಂಗಳೂರಿನಿಂದ ಉಡುಪಿ ಕಡೆಗೆ ಮೀನು ಸಾಗಿಸುತ್ತಿದ್ದ ಈಚರ್ ಟೆಂಪೊ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿದ್ದ ಇನ್ನೊಂದು ಲಾರಿಯ ಚಾಲಕ ಮೃತಪಟ್ಟಿದ್ದು, ಟೆಂಪೊ ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ Read More »

ಕರ್ನಾಟಕ
Scroll to Top