Accident

ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಎಸ್ಕೇಪ್ ➤ ಕಾರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

 (ನ್ಯೂಸ್ ಕಡಬ) newskadaba.com ಸುಳ್ಯ, ಅ. 03.  ಗೂನಡ್ಕ ಬಳಿ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದೆ. ತಕ್ಷಣವೇ ಸ್ಥಳೀಯರು ಕಾರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರಾ ಗಾಯವಾಗಿದೆ. ಗಾಯಗೊಂಡಿದ್ದ ಬೈಕ್ ಸವಾರನನ್ನು ತಕ್ಷಣವೇ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲುಗುಂಡಿ ಸಮೀಪದ ಗೂನಡ್ಕ ಬಳಿ ಮಹೀಂದ್ರ ಕಾರೋಂದು ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ಎಸ್ಕೇಪ್ ಆಗಿದೆ. ಇದನ್ನ ಗಮನಿಸಿದ ಸ್ಥಳೀಯರಾದ ಲಕ್ಷ್ಮೀಶ್ ಪಾಲ್ತಾಡು ಎಂಬುವವರು ಕಾರನ್ನು ಬೆನ್ನಟ್ಟಿ […]

ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಎಸ್ಕೇಪ್ ➤ ಕಾರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ ಬಳಿ ರಸ್ತೆ ಅಪಘಾತ, ದ್ವಿಚಕ್ರ ಸವಾರ ಮೃತ್ಯು ➤ ಸಾವಿನ ಮುನ್ಸೂಚನೆ ನೀಡಿತ್ತಾ ವಾಟ್ಸಪ್ ಸ್ಟೇಟಸ್.!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 02. ಉಪ್ಪಿನಂಗಡಿ ಬಳಿಯ ಎಚ್ ಎಂ ಆಡಿಟೋರಿಯಂ ಬಳಿಯಲ್ಲಿ ಗುರುವಾರ ರಾತ್ರಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಬಾರ್ಯ ಗ್ರಾಮದ ಬೇಂಗಿಲ ತುಂಬೆತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬುವರ ಪುತ್ರ ಮಹ್ಮಮದ್ ಆರಿಫ್ (23) ಎಂದು ಗುರುತಿಸಲಾಗಿದೆ. ಮಹ್ಮಮದ್ ಆರಿಫ್ ರವರು ಉಪ್ಪಿನಂಗಡಿ ಕಡೆಯಿಂದ ಕರಾಯ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ . ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು

ಉಪ್ಪಿನಂಗಡಿ ಬಳಿ ರಸ್ತೆ ಅಪಘಾತ, ದ್ವಿಚಕ್ರ ಸವಾರ ಮೃತ್ಯು ➤ ಸಾವಿನ ಮುನ್ಸೂಚನೆ ನೀಡಿತ್ತಾ ವಾಟ್ಸಪ್ ಸ್ಟೇಟಸ್.!! Read More »

ಕರಾವಳಿ, ಕ್ರೈಮ್ ನ್ಯೂಸ್

ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!!

(ನ್ಯೂಸ್ ಕಡಬ) newskadaba.com ಗೋಕರ್ಣ, ಅ.01:  ಗೋಕರ್ಣದಲ್ಲಿ  ಕಾರು‌ ಚಾಲಕನ ನಿಯಂತ್ರಣ ‌ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಗೋಕರ್ಣದ ಚೌಡಗೇರಿಯಲ್ಲಿ ನಡೆದಿದೆ. ಗೌರವ ದೇವರಾಯ ಗೋಳಿಕಟ್ಟೆ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.     ಕಾರಿನಲ್ಲಿದ್ದ ಇನ್ನೂ ಮೂವರು ಗಾಯಗೊಂಡಿದ್ದಾರೆ. ವರುಣ, ಹನಿಶ, ಹಾಗೂ ರಜತ ನಾಯಕ ಗಾಯಗೊಂಡವರು.ಬುಧವಾರ ಮಧ್ಯರಾತ್ರಿ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದಾಗ ಚೌಡಗೇರಿ ಬಳಿ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ 10 ಅಡಿ ಎತ್ತರಕ್ಕೆ ಜಿಗಿದು ಹೊಂಡಕ್ಕೆ ಬಿದ್ದಿದರಿಂದ ಈ ಅವಘಡ ಸಂಭವಿಸಿದೆ.

ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!! Read More »

ಕರಾವಳಿ, ಕರ್ನಾಟಕ

ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ20:  ಮಳೆಯ ಅಬ್ಬರದ ನಡುವೆಯು ಸರಣಿ ಅಪಘಾತಗಳು ಬೆಳಕಿಗೆ ಬರುತ್ತಿದೆ. ಇಂದು ಹೋಂಡಾ, ಡಿಯೋ, ಟೊಯೊಟೊ ಇನ್ನೋವಾ ಕಾರು ಮತ್ತು ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ನಡೆದಿದೆ.   ಮಂಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಇನೋವಾ ಕಾರು ಅಯ್ಯಪ್ಪ ಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಸಂಚರಿಸಿ ಎದುರಿನಿಂದ ಬರುತ್ತಿದ್ದ ಸ್ಕೂಟಿಸಯ ಹಿಂಬದಿಯಲ್ಲಿ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸರಣಿ

ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ Read More »

ಕರಾವಳಿ, ಕರ್ನಾಟಕ

ಕಲ್ಲೇಗ :4 ವಾಹನಗಳ ನಡುವೆ ಸರಣಿ ಅಪಘಾತ

(ನ್ಯೂಸ್ ಕಡಬ) newskadaba.com ಪುತ್ತೂರು , ಸೆ.17:   ಕಲ್ಲೇಗ ಬಳಿ ಓಮ್ನಿ, ಆಕ್ಷೀವಾ, ಡಿಯೋ, ಹಾಗೂ ಆಟೋರಿಕ್ಷಾ ನಡುವೆ ಕಳೆದ ದಿನ ರಾತ್ರಿ ಸರಣಿ ಅಪಘಾತ ನಡೆದಿದೆ.   ಓಮ್ನಿ ಚಾಲಕನ ಅತೀ ಚಾಲನೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾಯೊಂದಕ್ಕೆ ತಾಗಿ, ರಸ್ತೆಯ ಬದಿಯಲ್ಲಿದ್ದ ಡಿಯೋ ಮತ್ತು ಆಕ್ಟೀವಾಗಳಿಗೆ ಡಿಕ್ಕಿಯಾಗಿದೆ. ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನು ಆಕ್ಟೀವಾ ಚಾಲಕ ಸಂದೇಶ್ ಎಂಬುವವರಿಗೆ ಗಂಭೀರಾ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲೇಗ :4 ವಾಹನಗಳ ನಡುವೆ ಸರಣಿ ಅಪಘಾತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸ್ವಿಫ್ಟ್ ಕಾರು -​​ಲಾರಿ ನಡುವೆ ಭೀಕರ ಅಪಘಾತ ➤ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಸೆ. 15. ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿರುವ ದುರ್ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕಾರು ಮತ್ತು ಲಾರಿ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದವು.     ತಾಲೂಕಿನ ದೊಡ್ಡಪೈಲಗುರ್ಕಿಯ ರಸ್ತೆ ಹುಬ್ಬಿನಲ್ಲಿ ಈ ಆಕ್ಸಿಡೆಂಟ್ ನಡೆದಿದೆ. ಡಿಕ್ಕಿಯ ರಭಸಕ್ಕೆ ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಕಾರಿನಲ್ಲಿದ್ದ ಮತ್ತೋರ್ವ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..  

ಸ್ವಿಫ್ಟ್ ಕಾರು -​​ಲಾರಿ ನಡುವೆ ಭೀಕರ ಅಪಘಾತ ➤ ಮೂವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ➤ ಪಾದಚಾರಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.14: ಬಸ್ಸಿನಿಂದ ಇಳಿದ ಮಹಿಳೆ ಅಡ್ಯಾರ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಅಡ್ಯಾರು ಕಟ್ಟೆ ಎಂಬಲ್ಲಿ ನಡೆದಿದೆ.     ಮೃತ ಮಹಿಳೆಯನ್ನು ಅಳಪೆ ಪಡೀಲ್‌ ನಿವಾಸಿ 48 ವರ್ಷ ಪ್ರಾಯದ ಮಾಲತಿ ಎಂದು ಗುರುತಿಸಲಾಗಿದೆ. ಇನ್ನು ಬೈಕ್‌ ಚಾಲಕನಿಗೆ ಹಾಗೂ ಹಿಂಬದಿ ಸವಾರರಾದ ಬೈಕ್‌ ಚಾಲಕನ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ

ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ➤ ಪಾದಚಾರಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಗುರುವಾಯನಕೆರೆ : ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ

(ನ್ಯೂಸ್ ಕಡಬ) newskadaba.com ಗುರುವಾಯನಕೆರೆ, ಸೆ.14:  ಗುರುವಾಯನಕೆರೆಯ ವರಕಬೆ ಎಂಬಲ್ಲಿ ಬೊಲೆರೋ ಮತ್ತು ಜಿಪ್ಸಿ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಪ್ರಯಾಣಿಕರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಭವಿಸಿದ ರಭಸಕ್ಕೆ ವಾಹಗಳ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು ಘಟನ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುವಾಯನಕೆರೆ : ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ Read More »

ಕರಾವಳಿ

ಲಾರಿ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ..! ➤ ಸ್ಕೂಟಿ ಸವಾರ ಸ್ಥಳದಲ್ಲೇ ಮೃತ್ಯು..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.05:  ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಬೀಕರವಾದ ಅಪಘಾತದಲ್ಲಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಇಂದು (ಸೆ. 13) ನಡೆದಿದೆ.   ಅಳದಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ ನಡೆದಿದ್ದು, ಈ ಸಮಯ ಸ್ಕೂಟಿ ಸವಾರ ಗರ್ಡಾಡಿ ಗ್ರಾಮದ ನಿವಾಸಿ ಗಿರೀಶ್ ಮೂಲ್ಯ ರಸ್ತೆಗೆ ಎಸಯಲ್ಪಟ್ಟ ಪರಿಣಾಮ, ಅವರ ತಲೆಯ ಮೇಲೆಯೇ ಲಾರಿ ಚಲಿಸಿದೆ ಪರಿಣಾಮ ಹೆಲ್ಮೆಟ್ ಪುಡಿ ಪುಡಿಯಾಗಿ,

ಲಾರಿ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ..! ➤ ಸ್ಕೂಟಿ ಸವಾರ ಸ್ಥಳದಲ್ಲೇ ಮೃತ್ಯು..!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯ ಮೂಲದ ನ್ಯಾಯವಾದಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು. ಆ,28:  ನಗರದ ಬಿಜೈ KSRTC  ಬಳಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನ್ಯಾಯವಾದಿ ಬಿಎಂ ದುಗ್ಗಪ್ಪ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ‌ ನಿಧನರಾಗಿದ್ದಾರೆ.   ಸುಳ್ಯ ಮೂಲದ ಇವರು ನಗರದ ಆಕಾಶಭವನ ಬಳಿ ನೆಲೆಸಿದ್ದರು. ಬುಧವಾರ ಸಂಜೆ  ತನ್ನ ಮನೆಯಿಂದ ಬೆಸೆಂಟ್ ಶಿಕ್ಷಣ ಸಂಸ್ಥೆಯ ಬಳಿ ಇರುವ ಕಚೇರಿಗೆ ತೆರಳುತ್ತಿದ್ದಾಗ ಇವರು ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಇವರನ್ನು ಖಾಸಗಿ

ಮಂಗಳೂರು : ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯ ಮೂಲದ ನ್ಯಾಯವಾದಿ ಮೃತ್ಯು Read More »

ಕರಾವಳಿ, ಕರ್ನಾಟಕ
Scroll to Top