Accident

ಮಂಗಳೂರು: ಬೈಕ್-ಮೀನಿನ ಲಾರಿ ನಡುವೆ ಅಪಘಾತ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು ನ. 25: ಸುರತ್ಕಲ್ ಸಮೀಪದ ಎನ್ ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ದಿನ ಮೀನಿನ ಲಾರಿಯೊಂದು ಬೈಕ್ ಸವಾರನಿಗೆ ಢಿಕ್ಕಿಯಾದ ಪರಿಣಾಮದಿಂದಾಗಿ ಬೈಕ್ ಸವಾರ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸೂರಿಂಜೆ ನಿವಾಸಿ ಕುಮಾರ್(45) ಎಂದು ಗುರುತಿಸಲಾಗಿದೆ.     ಮಂಗಳೂರು ಕಡೆಯಿಂದ ಉಡುಪಿ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಎನ್ ಐ ಟಿಕೆ ಸಮೀಪ ಈ ದುರಂತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಂಗಳೂರು […]

ಮಂಗಳೂರು: ಬೈಕ್-ಮೀನಿನ ಲಾರಿ ನಡುವೆ ಅಪಘಾತ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಾಪು: ಕಾರು ಢಿಕ್ಕಿ ಪಾದಚಾರಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಾಪು ನ. 24: ಉಚ್ಚಿಲ ಪೇಟೆಯಲ್ಲಿ ಪಾದಚಾರಿಯೋರ್ವರಿಗೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸುಧಾಕರ ಶೆಟ್ಟಿ ಎಂದು ಗುರುತಿಸಲಾಗಿದೆ.   ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದಿಂದ ಮಂಗಳೂರಿಗೆ ಚಲಿಸುತ್ತಿದ್ದ ಕಾರು, ನರ್ಸರಿಯಲ್ಲಿ ಸಸಿ ಖರೀದಿಸಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಉಚ್ಚಿಲ ಪೇಟೆಯತ್ತ ಹೋಗುತ್ತಿದ್ದ ಪಾದಚಾರಿಯೋರ್ವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡು ಮೃತಪಟ್ಟ ವ್ಯಕ್ತಿಯನ್ನು ಸ್ಥಳೀಯರ ಸಹಕಾರದಿಂದ ಆಂಬ್ಯುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ

ಕಾಪು: ಕಾರು ಢಿಕ್ಕಿ ಪಾದಚಾರಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಪುತ್ತೂರು: ಕಾರು ಅಪಘಾತ

(ನ್ಯೂಸ್ ಕಡಬ) newskadaba.com ಪುತ್ತೂರು ನ. 24: ಕಳೆದ ದಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ನನ್ಯದಲ್ಲಿ ಕಾರೊಂದು ರಸ್ತೆ ಬೇಲಿಗೆ ಢಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ನಡೆದಿದೆ.     ಕಾರಿನಲ್ಲಿದ್ದ ಕಾರು ಚಾಲಕನಿಗೆ ಎರಡು ದಿನದ ಹಿಂದೆ ಮದುವೆಯಾಗಿದ್ದು, ಕಾರಿನಲ್ಲಿ ದಂಪತಿಗಳು ಮತ್ತು ಕಾರು ಚಾಲಕನ ತಂಗಿ ಪ್ರಯಾಣಿಸುತ್ತಿದ್ದು, ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರು ನನ್ಯ ಸಮೀಪದಲ್ಲಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿನ

ಪುತ್ತೂರು: ಕಾರು ಅಪಘಾತ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಸ್ಕೂಟರ್ ಗೆ ಲಾರಿ ಢಿಕ್ಕಿ ➤ ದ್ವಿಚಕ್ರ ವಾಹನ ಸವಾರ ಸ್ಥಳಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಚ್ಚಿಲ ನ. 23: ಇಂದು ಮುಂಜಾನೆ ಉಚ್ಚಿಲ ಪೇಟೆಯಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹೆಜಮಾಡಿ ಅಡ್ಕ ಹೌಸ್ ನಿವಾಸಿ ವಾಸು ಡಿ. ಕೋಟ್ಯಾನ್(65) ಎಂದು ಗುರುತಿಸಲಾಗಿದೆ.     ಮಂಗಳೂರಿನತ್ತ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿ ಹಾಗೂ ಉಚ್ಚಿಲ ಪೇಟೆಯಿಂದ ಪಡುಬಿದ್ರೆ ಕಡೆಗೆ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ

ಮಂಗಳೂರು: ಸ್ಕೂಟರ್ ಗೆ ಲಾರಿ ಢಿಕ್ಕಿ ➤ ದ್ವಿಚಕ್ರ ವಾಹನ ಸವಾರ ಸ್ಥಳಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು:ಪಿಕ್ ಅಪ್ ಜೀಪು ಮತ್ತು ಆ್ಯಕ್ಟೀವಾ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು ನ. 21: ಪುತ್ತೂರು-ಉಪ್ಪಿನಂಗಡಿ ರಸ್ತೆಯ 34 ನೇ ನೆಕ್ಕಿಲಾಡಿ ಗ್ರಾಮದಲ್ಲಿ ಮರಳು ಸಾಗಾಟದ ಪಿಕ್ ಅಪ್ ಜೀಪು ಹಾಗೂ ಆ್ಯಕ್ಟೀವಾ ನಡುವೆ ಢಿಕ್ಕಿ ಹೊಡೆದಿದ್ದು, ಆ್ಯಕ್ಟೀವಾ ಸವಾರ ಗಾಯಾಗೊಂಡ ಘಟನೆ ಇಂದು ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಯು.ಜಿ.ರಾಧಾರವರೆಂದು ಗುರುತಿಸಲಾಗಿದೆ.     ಯು.ಜಿ ರಾಧಾರವರು ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರುರವರ ಜೊತೆ ಮಾತಾನಾಡಲು ಉಪ್ಪಿನಂಗಡಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು. ಢಿಕ್ಕಿಯ ರಭಸಕ್ಕೆ ಕೈ ಕಾಲು ಗಾಯವಾಗಿದ್ದು,

ಪುತ್ತೂರು:ಪಿಕ್ ಅಪ್ ಜೀಪು ಮತ್ತು ಆ್ಯಕ್ಟೀವಾ ನಡುವೆ ಢಿಕ್ಕಿ Read More »

ಕರಾವಳಿ

ನಟಿ, ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ➤ ಇಬ್ಬರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com  ನ. 21: ಖ್ಯಾತ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ ಕಾರು ಗದಗದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಇನ್ನೊಂದು ಕಾರಿನ ನಡುವೆ ಕಳೆದ ದಿನ ರಾತ್ರಿ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಗಳನ್ನು ಧಾರವಾಡ ಮೂಲದ ಸ್ಮಿತಾ ಕಟ್ಟಿ ಹಾಗೂ ಇನ್ನೋರ್ವ ವ್ಯಕ್ತಿ ಎಂದು ಗುರುತಿಸಲಾಗಿದೆ.     ಉಮಾಶ್ರೀ ಅವರನ್ನು ಬಿಟ್ಟು ಕಾರು ಚಾಲಕ ತಮ್ಮೂರಿಗೆ ಹೊರಟಿದ್ದು, ಹುಬ್ಬಳ್ಳಿ ತಾಲ್ಲೂಕಿನ

ನಟಿ, ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ➤ ಇಬ್ಬರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಭೀಕರ ರಸ್ತೆ ಅಪಘಾತ ➤ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 19. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ಇಂದು ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿರುವ ಪರಿಣಾಮದಿಂದಾಗಿ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಢಿಕ್ಕಿ ಹೊಡೆದ ಪರಿಣಾಮದಿಂದಾಗಿ ಬೈಕ್ ನಲ್ಲಿದ್ದ ಸವಾರ ಹಾಗೂ ಓಮ್ನಿ ಕಾರಿನ ಚಾಲಕ ಸುನೀಲ್(28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.   ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ ಹಿನ್ನಲೆಯಿಂದಾಗಿ ಓಮ್ನಿ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಓಮ್ನಿಗೆ ಢಿಕ್ಕಿ ಹೊಡೆದಿದ್ದು, ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ

ಭೀಕರ ರಸ್ತೆ ಅಪಘಾತ ➤ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ನಾಲ್ಕೂರು: ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ

(ನ್ಯೂಸ್ ಕಡಬ) newskadaba.com ನಾಲ್ಕೂರು, ನ. 19. ಕಳೆದ ದಿನ ನಾಲ್ಕೂರು ಗ್ರಾಮದ ಅಂಜೇರಿ ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ ಹೊಡೆದು ಬೈಕ್ ಸವಾರರು ಗಾಯಗೊಂಡ ಘಟನೆ ನಡೆದಿದೆ.     ಕಲ್ಮಕಾರಿನವರೊಬ್ಬರು ಗುತ್ತಿಗಾರು ಕಡೆ ತೆರಳುತ್ತಿದ್ದು, ಕಲ್ಮಕಾರಿನ ಯುವಕ ಮತ್ತು ಬಾಲಕನೊಬ್ಬ ಬೈಕ್ ನಲ್ಲಿ ಗುತ್ತಿಗಾರಿನಿಂದ ನಡುಗಲ್ಲು ಕಡೆ ಬರುತ್ತಿದ್ದು ಅಂಜೇರಿ ಬಳಿ ಕಾರಿಗೆ ಬೈಕ್ ನವರು ಬಂದು ಢಿಕ್ಕಿ ಹೊಡೆದಿದ್ದಾರೆ. ಬೈಕ್ ನಲ್ಲಿದ್ದ ಹಿಂಬದಿ ಬಾಲಕನ ಕಾಲಿಗೆ ಬಲವಾದ ಏಟು

ನಾಲ್ಕೂರು: ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ Read More »

ಕರಾವಳಿ

ಬಿಳಿನೆಲೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಬಿಳಿನೆಲೆ, ನ. 18: ಬಿಳಿನೆಲೆಯಲ್ಲಿ ಕರೆಂಟ್ ಕಂಬಕ್ಕೆ ಯಾತ್ರಾರ್ಥಿಗಳ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.   ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಕರ ಕಾರು ನಿದ್ರೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಸದ್ಯ ಕಾರಿನಲ್ಲಿ ಐವರಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

ಬಿಳಿನೆಲೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು Read More »

ಕರಾವಳಿ

ಗುತ್ತಿಗಾರು: ಚಾಲಕನ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ನ.12: ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇದ್ದ ಕರೆಂಟ್ ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ಢಿಕ್ಕಿ ಹೊಡೆದು ಕಂಬ ತುಂಡಾದ ಘಟನೆ ನಡೆದಿದೆ.     ಕುವೆಕೋಡಿ ಸೋಮಪ್ಪರವರ ಕಾರು ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮದಿಂದಾಗಿ ಕಂಬ ತುಂಡಾಗಿ ಕೆಳಕ್ಕೆ ಬೀಳದ ಕಾರಣ ಕಾರಲ್ಲಿ ಇದ್ದ ಸೋಮಪ್ಪ ಹಾಗೂ ಅವರ ಪುತ್ರ ಅದೃಷ್ಟವಶತ್ ನಿಂದ ಪಾರಾಗಿದ್ದಾರೆ.    

ಗುತ್ತಿಗಾರು: ಚಾಲಕನ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು Read More »

ಕರಾವಳಿ
Scroll to Top