Accident

ಬಸ್ ಹಾಗೂ ಕಾರು ನಡುವೆ ಅಪಘಾತ- ಕಾರು ಚಾಲಕ ಅದೃಷ್ಟವಶಾತ್ ಪಾರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 25. ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಮುಡಿಪು ಜಂಕ್ಷನ್ ನಲ್ಲಿ ಸೋಮವಾರದಂದು ರಾತ್ರಿ ವೇಳೆ ಸಂಭವಿಸಿದೆ. ಮಂಗಳೂರಿನಿಂದ ಬಿ.ಸಿ ರೋಡಿನತ್ತ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ಮುಡಿಪು ಜಂಕ್ಷನ ನಲ್ಲಿ ತಿರುಗುವ ಸಂದರ್ಭ, ಭಾರತಿ ಶಾಲೆ ಕಡೆಯಿಂದ ಬರುತ್ತಿದ್ದ ಝೆನ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸು ಮುಂಭಾಗಕ್ಕೆ ಕಾರು ಒಳನುಗ್ಗಿದ್ದು, ಕಾರು ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ. ಮಂಗಳೂರು ದಕ್ಷಿಣ […]

ಬಸ್ ಹಾಗೂ ಕಾರು ನಡುವೆ ಅಪಘಾತ- ಕಾರು ಚಾಲಕ ಅದೃಷ್ಟವಶಾತ್ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ಕೂಟರ್ ಸ್ಕಿಡ್ ಆಗಿ ದಂಪತಿಗಳಿಬ್ಬರಿಗೆ ಗಾಯ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.24. ಸ್ಕೂಟರ್ ಸ್ಕಿಡ್ ಆಗಿ ಬಿದ್ದು ದಂಪತಿ ಗಾಯಗೊಂಡ ಘಟನೆ ಬಲ್ನಾಡ್ ಗ್ರಾಮ ಆನಂದಸಾಗರ ಎಂಬಲ್ಲಿ ನಡೆದ ಕುರಿತು ವರದಿಯಾಗಿದೆ. ಬಲ್ನಾಡ್ ಗ್ರಾಮದ ಸುಂಕದ ಮೂಲೆ ನಿವಾಸಿ ಪುರಂದರ ಮತ್ತು ಪತ್ನಿ ಮಲ್ಲಿಕಾ.ಬಿ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಸ್ಕಿಡ್ ಆಗಿ ಮಗುಚಿ ಬಿದ್ದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಕೂಟರ್ ಸ್ಕಿಡ್ ಆಗಿ ದಂಪತಿಗಳಿಬ್ಬರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ರಸ್ತೆ ಅಪಘಾತ ➤ ಯುವಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.24. ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ರಸ್ತೆಯ ಕೆಮ್ಮಾಯಿ ಪೆಟ್ರೋಲ್ ಬಂಕ್ ರಾತ್ರಿ ಸಂಭವಿಸಿದೆ. ಮೃತ ಬೈಕ್ ಸವಾರನನ್ನು ಉಪ್ಪಿನಂಗಡಿ ಸೇಡಿಯಾಪು ಬಳಿಯ ನಿವಾಸಿ ಚೈತ್ರೇಶ್ ಯಾನೆ ಚರಣ್ (19) ಎಂದು ಗುರುತಿಸಲಾಗಿದೆ. ಟರ್ನ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎನ್ನಲಾಗಿದೆ. ಚೈತ್ರೇಶ್ ಬೈಕ್ ಖರೀದಿಸಿ ಕೇವಲ ಒಂದು ತಿಂಗಳಷ್ಟೇ ಆಗಿದ್ದು, ಸ್ಥಳಕ್ಕೆ ಪುತ್ತೂರು ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  

ಪುತ್ತೂರು: ರಸ್ತೆ ಅಪಘಾತ ➤ ಯುವಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಅಪರಿಚಿತ ಕಾರು ಢಿಕ್ಕಿ – ಪಾದಚಾರಿ ಮೃತ್ಯು ➤ ಚಾಲಕ ನಾಪತ್ತೆ

(ನ್ಯೂಸ್ ಕಡಬ)newskadaba.com ಉಡುಪಿ, ಜು.24. ವಾಹನವೊಂದು ಪಾದಚಾರಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ವ್ಯಕ್ತಿಯನ್ನು ಸ್ಥಳೀಯ ನಿವಾಸಿ ರಮೇಶ್ ಪೂಜಾರಿ(60) ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಹೊಟ್ಟೆ ಮತ್ತು ಕೈಗಳು ಛಿದ್ರವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಪರಿಚಿತ ಕಾರು ಢಿಕ್ಕಿ – ಪಾದಚಾರಿ ಮೃತ್ಯು ➤ ಚಾಲಕ ನಾಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಕೂಟರ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ- ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಜು. 22. ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡ್ಕ ಸಮೀಪದ ಒಂತಿಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಸ್ಕೂಟರ್ ಸವಾರನನ್ನು ಕೃಷ್ಣ ಪೂಜಾರಿ (57) ಎಂದು ಗುರುತಿಸಲಾಗಿದೆ. ಸ್ಕೂಟರ್ ನಲ್ಲಿದ್ದ ಸಹಸವಾರ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ  ಕುರಿತು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ- ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಲಾರಿ ಮತ್ತು ಇಕೋ ನಡುವೆ ಅಪಘಾತ ! – ವಾಹನ ಜಖಂ

(ನ್ಯೂಸ್ ಕಡಬ)newskadaba.com ವಿಟ್ಲ, ಜು.22. ಮಣ್ಣು ತುಂಬಿದ್ದ ವಾಹನಕ್ಕೆ ಇಕೋ ಢಿಕ್ಕಿಯಾದ ಘಟನೆ ಉಕ್ಕುಡ – ಕನ್ಯಾನ ರಸ್ತೆಯಲ್ಲಿ ಇಂದು ಸಂಭವಿಸಿದೆ. ರಸ್ತೆಯಲ್ಲಿ ಸಂಚರಿಸುತ್ತದ್ದ ಮಣ್ಣಿನ ಲಾರಿಯು ಇಕೋ ವಾಹನಕ್ಕೆ ಡಿಕ್ಕಿಯಾಗಿ ವಾಹನ ಜಖಂಗೊಂಡಿದ್ದು, ಯಾರೂ ಗಾಯಗೊಂಡಿಲ್ಲ ಎಂದು ವರದಿ ತಿಳಿಸಿದೆ.

ಲಾರಿ ಮತ್ತು ಇಕೋ ನಡುವೆ ಅಪಘಾತ ! – ವಾಹನ ಜಖಂ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 22. ನಿಯಂತ್ರಣ ತಪ್ಪಿದ ಲಾರಿಯೊಂದು ಮನೆಮೇಲೆ ಬಿದ್ದ ಘಟನೆ ತಾಲೂಕಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ. ಭಜರಂಗಿ ರೋಡ್ ಲೈನ್ಸ್ ಸಂಸ್ಥೆಗೆ ಸೇರಿದ ಲಾರಿ, ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಕೆಂಪು ಇಟ್ಟಿಗೆ ಕೆಳಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ರಸ್ತೆ ಬದಿ ರಾಷ್ಟ್ರೀಯ ಹೆದ್ದಾರಿಯವರು ಹಾಕಿದ್ದ ತಡೆ ಬೇಲಿ ಮುರಿದು ಮನೆಯ ಶೆಡ್ ಮೇಲೆ ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ Read More »

ಕರಾವಳಿ

ಇನೋವಾ ಕಾರು ಮತ್ತು ಲಾರಿ ನಡುವೆ ಅಪಘಾತ ! ➤ ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಹಾಸನ, ಜು.22. ಟಿಪ್ಪರ್ ವಾಹನ ಢಿಕ್ಕಿಯಾಗಿ ಇನೋವಾ ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ನಡೆದಿದೆ. ಕುಪ್ಪಳ್ಳಿ ಗ್ರಾಮದ ಚೇತನ್, ಗುಡ್ಡೇನಹಳ್ಳಿ ಗ್ರಾಮದ ಅಶೋಕ್, ತಟ್ಟೆಕೆರೆ ಗ್ರಾಮದ ಪುರುಷೋತ್ತಮ ಹಾಗೂ ಆಲೂರು ತಾಲ್ಲೂಕಿನ ಚಿಗಳೂರು ಗ್ರಾಮದ ದಿನೇಶ್ ಮೃತರು ಎಂದು ಗುರುತಿಸಲಾಗಿದೆ. ಸದ್ಯ ಮೃತದೇಹಗಳನ್ನು ಆಲೂರಿನ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇನೋವಾ ಕಾರಿನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದಾಗ

ಇನೋವಾ ಕಾರು ಮತ್ತು ಲಾರಿ ನಡುವೆ ಅಪಘಾತ ! ➤ ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಿಕ್ಷಕಿಯನ್ನು ಗಂಭೀರವಾಸ್ಥೆಗೆ ತಳ್ಳಿದ ವೀಲಿಂಗ್ ಗ್ಯಾಂಗ್ – ದೂರು ದಾಖಲು

(ನ್ಯೂಸ್ ಕಡಬ) newskadaba.com ಮೈಸೂರು, ಜು. 21. ದಿನದಿಂದ ದಿನಕ್ಕೆ ಪುಂಡರ ಹಾವಳಿ ಹೆಚ್ಚುತ್ತಿದ್ದು, ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ವರದಿಯಾಗಿದ್ದು, ವೀಲಿಂಗ್ ಮಾಡುತ್ತಿದ್ದ ಯುವಕರು ಶಿಕ್ಷಕಿಯೋರ್ವರ ಸ್ಕೂಟರ್ ಗೆ ಢಿಕ್ಕಿ ಹೊಡೆದು ಶಿಕ್ಷಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಶಿಕ್ಷಕಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಗಾಯತ್ರಿಪುರಂ ಚರ್ಚ್​ ಬಳಿ ಕೆಟಿಎಂ ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ಮೂಲಕ ವೀಲಿಂಗ್ ಮಾಡುತ್ತಾ ಬಂದ ಪುಂಡರು ಎದುರಿನಿಂದ ಬರುತ್ತಿದ್ದ ಸ್ಕೂಟರ್​ಗೆ

ಶಿಕ್ಷಕಿಯನ್ನು ಗಂಭೀರವಾಸ್ಥೆಗೆ ತಳ್ಳಿದ ವೀಲಿಂಗ್ ಗ್ಯಾಂಗ್ – ದೂರು ದಾಖಲು Read More »

ಕರ್ನಾಟಕ

ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಗುದ್ದಿ ಜಖಂಗೊಂಡ ಘಟನೆ ಗುರುವಾರದಂದು ನಗರದ ಪಿವಿಎಸ್‌ ಬಳಿಯ ಎಂ.ಜಿ. ರೋಡ್‌ನ‌ಲ್ಲಿ ನಡೆದಿದೆ. ಕಾಸರಗೋಡು- ಮಂಗಳೂರು ನಡುವೆ ಸಂಚರಿಸುತ್ತಿದ್ದ ಬಸ್‌, ಇನ್ನೊಂದು ಕೆಎಸ್‌ಆರ್‌ಟಿಸಿಯ ಬಸ್ ನ್ನು ಹಿಂದಿಕ್ಕುವ ಭರದಲ್ಲಿ ಕಾಂಪಿಟೀಶನ್‌ ಮಾಡಿಕೊಂಡು ಪಿವಿಎಸ್‌ ಜಂಕ್ಷನ್‌ ನಿಂದ ಎಂ.ಜಿ ರಸ್ತೆಗೆ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಬಂದಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಈ ಸಂದರ್ಭ

ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top