ಟ್ರಕ್- ಬಸ್ ಡಿಕ್ಕಿ: ಓರ್ವ ಪ್ರಯಾಣಿಕ ಮೃತ್ಯು..!
(ನ್ಯೂಸ್ ಕಡಬ) newskadaba.com ಮುಂಬೈ, ಅ. 19. ಎಕ್ಸ್ ಪ್ರೆಸ್ ವೇಯಲ್ಲಿ ಇಂದು ಮುಂಜಾನೆ ಸರ್ಕಾರಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಣೆ ಜೆಲ್ಲೆಯ ಲೋನಾವಾಲಾ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತಪಟ್ಟವರನ್ನುವಿಶ್ವನಾಥ ಭಗವಾನ್ ವಾಘಮಾರೆ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ರಕ್- ಬಸ್ ಡಿಕ್ಕಿ: ಓರ್ವ ಪ್ರಯಾಣಿಕ ಮೃತ್ಯು..! Read More »
ಕರ್ನಾಟಕ, ಕ್ರೈಮ್ ನ್ಯೂಸ್


