ಉಪ್ಪಿನಂಗಡಿ: ಗೆಳತಿಯ ಮನೆಗೆ ಹೋಗಿ ಹಿಂತಿರುಗಿ ಬಂದವನಿಗೆ ಕಾದಿತ್ತು ಶಾಕ್..! ದರೋಡೆಕೋರನೆಂದು ಬಿಂಬಿಸಿ ಹಣ ಲೂಟಿಗೈದ ತಂಡ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 04. ರಾತ್ರಿ ವೇಳೆ ಗೆಳತಿಯ ಮನೆಗೆ ಹೋಗಿ ಹಿಂದಿರುಗುತ್ತಿದ್ದ ಯುವಕನನ್ನು ದರೋಡೆಕೋರನೆಂದು ಬಿಂಬಿಸಿ ಪೊಲೀಸರಿಗೊಪ್ಪಿಸುವೆನೆಂದು ಬೆದರಿಸಿ ಯುವಕನ ಬೈಕ್ ನ್ನು ವಶದಲ್ಲಿರಿಸಿ 2 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟು 25 ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನನ್ನು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮುರಿಯಾಳ ಮನೆ ನಿವಾಸಿ ಸಂಶು ಯಾನೆ ಸಂಶುದ್ದೀನ್ (38) ಎಂದು ಗುರುತಿಸಲಾಗಿದೆ. […]

