ರಾಜ್ಯದ ಸುಮಾರು 1,749 ಗ್ರಾಮಗಳು ರಸ್ತೆ ಸಂಪರ್ಕ ಜಾಲದ ಕೊರತೆಯಿಂದಾಗಿ ಕೆಂಪು ಬಸ್ಸಿಲ್ಲ! ಇದು ಪ್ರಗತಿಶೀಲ ಕರ್ನಾಟಕಕ್ಕೆ ಮುಜುಗರ ತರುವ ಸಂಗತಿ
(ನ್ಯೂಸ್ ಕಡಬ) newskadaba.com,ಡಿ.23 ಬೆಂಗಳೂರು: ಸಮರ್ಪಕ ರಸ್ತೆ ಕೊರತೆ ಕಾರಣಕ್ಕೆ ರಾಜ್ಯದ ಸಾವಿರಾರು ಹಳ್ಳಿಗಳು ಕೆಂಪು ಬಸ್‌ಗಳ ಮುಖವನ್ನೇ ನೋಡಿಲ್ಲ. ರಸ್ತೆ ಸಂಪರ್ಕ ಜಾಲವಿಲ್ಲದ ಕಾರಣಕ್ಕೆ ರಾಜ್ಯದ ಸುಮಾರು 1,749 ಗ್ರಾಮಗಳತ್ತ ಸರಕಾರಿ ಬಸ್‌ಗಳೇ ಸುಳಿಯುತ್ತಿಲ್ಲ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಸರಕಾರ, ರಾಜ್ಯ ವ್ಯಾಪಿ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಸಂಪರ್ಕ ಸಾಧಿಸಿದೆ. ರಾಜ್ಯದ ಸಾರ್ವಜನಿಕ ಸಾರಿಗೆಯ ಪ್ರಮುಖ ಭಾಗವಾಗಿರುವ ಕೆಎಸ್‌ಆರ್‌ಟಿಸಿ, ರಾಜ್ಯದ ಉದ್ದಗಲಕ್ಕೂ ಸೇವೆ ಒದಗಿಸುತ್ತಿದೆ. ಆದರೆ, […]

