ಹಳೆನೇರೆಂಕಿ: ಸತ್ತ ಮಂಗ ಪತ್ತೆ ಜನರಲ್ಲಿ ಖಾಯಿಲೆ ಭೀತಿ ►ಇಲಾಖಾಧಿಕಾರಿಗಳ ಭೇಟಿಪರಿಶೀಲನೆ ತಪಾಸಣೆಗಾಗಿ ಮಂಗನ ಅಂಗಾಂಗ ಶಿವಮೊಗ್ಗಕ್ಕೆ ರವಾನೆ
(ನ್ಯೂಸ್ ಕಡಬ) newskadaba.com. ಹಳೆನೇರೆಂಕಿ,ಜ.17.ರಾಜ್ಯದ ಕೆಲಭಾಗಗಳಲ್ಲಿ ಮಂಗನ ಖಾಯಿಲೆ ಕಾಣಿಸಿಕೊಳ್ಳುತ್ತಿರುವುದು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಂಗವೊಂದು ಸಾವನ್ನಪ್ಪಿದ್ದು ಪರಿಸರದ ಜನರಲ್ಲಿ ಭೀತಿ ಉಂಟುಮಾಡಿದೆ. ಘಟನಾ ಸ್ಥಳಕ್ಕೆ ಆರೋಗ್ಯ, ಪಶುವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತಂಡ ಭೇಟಿ ನೀಡಿಮುಂಜಾಗ್ರತಾ ಕ್ರಮ ಕೈಗೊಂಡಿದೆ.ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದಲ್ಲಿ ಜ.16ರಂದು ಮಂಗವೊಂದು ಮೃತಪಟ್ಟು ಜನರಲ್ಲಿ ಭೀತಿ ಉಂಟುಮಾಡಿದೆ. ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ಆದಂ ಎಂಬವರ ತೋಟದಲ್ಲಿ ಮಂಗ […]

