ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ
(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್ ರವರು ಫೆ.4ರಂದು ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲೆಗೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಶಾಲೆಯಲ್ಲಿ ಈಗಾಗಲೇ 8ನೇ ತರಗತಿ ಪ್ರಾರಂಭಿಸಲಾಗಿದ್ದು, ಮುಂದೆ 9 ಹಾಗೂ 10ನೇ ತರಗತಿ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಪರಿಸರದ ಕಿ.ಪ್ರಾ ಹಾಗೂ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹತ್ತಿರವೆಲ್ಲಿಯೂ ಸರಕಾರಿ ಶಾಲೆಗಳಿಲ್ಲದೇ ಖಾಸಗಿ ಶಾಲೆಗಳನ್ನು ಅವಲಂಭಿಸುತ್ತಿದ್ದು, ನೂಜಿಬಾಳ್ತಿಲದಲ್ಲಿ ಹೈಸ್ಕೂಲ್ […]

