ಸೌದಿ ಅರೇಬಿಯಾ ಬಸ್ ದುರಂತ – ಬೀದರ್ ಮೂಲದ ವೃದ್ಧೆ ಮೃತ್ಯು

(ನ್ಯೂಸ್‌ ಕಡಬ) newskadaba.com,  ನ.18 ಬೀದರ್: ಸೌದಿ ಅರೇಬಿಯಾದಲ್ಲಿ ಬಸ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೀದರ್ ಮೂಲದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ವೃದ್ಧೆಯನ್ನು ಬೀದರ್ ಮೂಲದ ರಹಮತ್ ಬಿ (80) ಎಂದು ತಿಳಿಯಾಗಿದೆ.ಬೀದರ್ ನಗರದ ಮೈಲೂರಿನ ಸಿಎಂಸಿ ಕಾಲೋನಿಯ ನಿವಾಸಿಯಾಗಿರುವ ಇವರು ನ.9ರಂದು ಬೀದರ್‌ನಿಂದ ಮೆಕ್ಕಾ ಹಾಗೂ ಮದೀನಾಗೆ ತೆರಳಿದ್ದರು. ಬಸ್ ಅಪಘಾತದಲ್ಲಿ ವೃದ್ಧೆ ಸಜೀವ ದಹನವಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವೃದ್ಧೆ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. […]

ಸೌದಿ ಅರೇಬಿಯಾ ಬಸ್ ದುರಂತ – ಬೀದರ್ ಮೂಲದ ವೃದ್ಧೆ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್