ಸುಳ್ಯ: ಬಸ್ನ ಟಯರ್ ಸ್ಫೋಟ; ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ
(ನ್ಯೂಸ್ ಕಡಬ) newskadaba.com ಮಾ. 22: ಕೆಎಸ್ಆರ್ಟಿಸಿ ಬಸ್ನ ಟಯರ್ ಸ್ಫೋಟಗೊಂಡು ಟಯರ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಬಾಕಿಯಾದ ಘಟನೆ ಅರಂಬೂರು ಬಳಿ ಮಾ.21ರಂದು ನಡೆದಿದೆ. ಕೊಯನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬಸ್ ಅರಂಬೂರು ಬಳಿ ಬರುತ್ತಿದ್ದಂತೆ ಬಸ್ನ ಟಯರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತು. ಈ ಬಸ್ನಲ್ಲಿ ಪ್ರಯಾಣಿಕರಲ್ಲದೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಸುಳ್ಯಕ್ಕೆ ಬರುತ್ತಿದ್ದರು. ಬಸ್ ಕೈಕೊಟ್ಟ ನಂತರ ವಿದ್ಯಾರ್ಥಿಗಳು ರಿಕ್ಷಾ, ಬೈಕ್ ಹಾಗೂ ಜೀಪ್ಗಳಲ್ಲಿ ತೆರಳಿದರೆಂದು ತಿಳಿದುಬಂದಿದೆ.
