ಸುಳ್ಯ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ಐತಿಹಾಸಿಕ ಸಾಧನೆ ವಿಶ್ವ ದಾಖಲೆ ಬರೆದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ
(ನ್ಯೂಸ್ ಕಡಬ) newskadaba.com, ಎ.13: ಕಲೆ ಮತ್ತು ಸಾಹಸಕ್ಕೆ ಸಾಟಿಯಿಲ್ಲ ಎಂಬುದನ್ನು ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಅಭಿಷೇಕ್ ಕಣ್ಮರಡ್ಕ ಸಾಬೀತುಪಡಿಸಿದ್ದಾರೆ. ಸತತ 24 ಗಂಟೆಗಳ ಕಾಲ ನಿರಂತರವಾಗಿ ಕುಚಿಪುಡಿ ನೃತ್ಯ ಪ್ರದರ್ಶನ ನೀಡುವ ಮೂಲಕ ಅವರು ಪ್ರತಿಷ್ಠಿತ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಸಾಧನೆಗೆ ಭಾಜನರಾಗಿದ್ದಾರೆ. ದಾಖಲೆಯ ಹಾದಿ: ಏಪ್ರಿಲ್ 11ರಂದು ಸಂಜೆ 6:30ಕ್ಕೆ ನೆಹರೂ ಮೆಮೊರಿಯಲ್ ಕಾಲೇಜಿನ ಸಭಾಂಗಣದಲ್ಲಿ ಆರಂಭವಾದ ನೃತ್ಯ ಪ್ರದರ್ಶನವು, ಏಪ್ರಿಲ್ 12ರ ಸಂಜೆ 6:30ರವರೆಗೆ […]

