ಸಾರ್ವಜನಿಕರ ಕೋಟ್ಯಾಂತರ ಚೀಟಿ ಹಣದೊಂದಿಗೆ ದಂಪತಿ ಪರಾರಿ-ಡಿ.ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ನೆರವು ಕೋರಿದ ಸಂತ್ರಸ್ತರು
(ನ್ಯೂಸ್ ಕಡಬ) newskadaba.com ಜು. 07, ಬೆಂಗಳೂರು: ಚೀಟಿಯಲ್ಲಿ ಹೂಡಿಕೆ ಮಾಡಿದ್ದ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾದ ದಂಪತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರಿಗೆ ದೂರು ನೀಡಿದ್ದಾರೆ. ಜೆ.ಪಿ ನಗರದ ನಾಲ್ವರು ಜನರ ಕುಟುಂಬವೊಂದು 250 ಕ್ಕೂ ಹೆಚ್ಚು ಜನರನ್ನು ವಂಚಿಸಿ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ. ಪುಟ್ಟೇನಹಳ್ಳಿ ನಿವಾಸಿ ಪುಷ್ಪಲತಾ ವಿ (45) ಎಂಬುವರು ಸುಧಾ, ಅವರ ಪತಿ ಸಿದ್ಧಾಚಾರಿ, ಮಗ ಯಶವಂತ್ ಮತ್ತು ಮಗಳು ವರ್ಷಿಣಿ ವಿರುದ್ಧ […]

