ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಕಚೇರಿ ಉದ್ಘಾಟನೆ ಸಂಘದ ಲೋಗೋ ಬಿಡುಗಡೆ,ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ
(ನ್ಯೂಸ್ ಕಡಬ)newskadaba.com ಅ. 07. ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಅಕ್ಟೋಬರ್ 6 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ಇರುವ ವೆನಿಸ್ಸಿಯಾ ಬಿಲ್ಡಿಂಗ್ ನಲ್ಲಿ ನಡೆಯಿತು. ತೂಗು ಸೇತುವೆಯ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರತ್ ತೊಡಿಕ್ಕಾನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ ಬಿ […]

