ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆರವುಗೊಳಿಸುವಾಗ ಬಾವಿಗೆ ಬಿದ್ದು ಯುವಕನೋರ್ವ ಸಾವು
(ನ್ಯೂಸ್ ಕಡಬ) newskadaba.com, ಸೆ.26 ಕಾಸರಗೋಡು : ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆಗೆಯಲೆತ್ನಿಸುತ್ತಿದ್ದಾಗ ಬಾವಿಗೆ ಬಿದ್ದು ಯುವಕ ಮೃತಪಟ್ಟ ಘಟನೆ ಉದುಮ ಸಮೀಪದ ವಳಿಯವಲಪ್ಪು ಎಂಬಲ್ಲಿ ನಡೆದಿದೆ. ವಳಿಯವಲಪ್ಪುವಿನ ಅಶ್ವಿನ್ ಅರವಿಂದ (18) ಮೃತಪಟ್ಟವರು. ಸರ್ವೀಸ್ ವಯರ್ ಮೇಲೆ ಬಿದ್ದಿದ್ದ ತಾಳೆಗರಿಯನ್ನು ಬಾವಿಯ ಕಟ್ಟೆಗೆ ಹತ್ತಿ ತೆಗೆಯಲೆತ್ನಿಸುತ್ತಿದ್ದಾಗ ಅಶ್ವಿನ್ ಬಾವಿಗೆ ಬಿದ್ದಿದ್ದು, ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆತ ಅದಾಗಲೇ ಸಾವನ್ನಪ್ಪಿದನು ಎಂದು ವೈದ್ಯರು ತಿಳಿಸಿದ್ದಾರೆ.
ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆರವುಗೊಳಿಸುವಾಗ ಬಾವಿಗೆ ಬಿದ್ದು ಯುವಕನೋರ್ವ ಸಾವು Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
