ರಾಜಸ್ಥಾನ: ಕಳ್ಳತನ ಆರೋಪದಲ್ಲಿ ದಲಿತ ಯುವಕರಿಗೆ ಚಿತ್ರಹಿಂಸೆ, ಸ್ಕ್ರೂಡ್ರೈವರ್‌ನಿಂದ ಖಾಸಗಿ ಭಾಗಕ್ಕೆ ತಿವಿದ ದುಷ್ಕರ್ಮಿಗಳು
ಅಮಾನವೀಯ ಘಟನೆಯ ವೀಡಿಯೊ ವೈರಲ್ ಜೈಪುರ್, ಫೆ.20: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರಿಗೆ ಚಿತ್ರಹಿಂಸೆ ನೀಡಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದ್ದು, ವೈರಲ್ ಆದ ವೀಡಿಯೊದಲ್ಲಿ ದುಷ್ಕರ್ಮಿಯೊಬ್ಬ ಸಂತ್ರಸ್ತನನ್ನು ಪೆಟ್ರೋಲ್‌ನಲ್ಲಿ ಅದ್ದಿದ ಸ್ಕ್ರೂಡ್ರೈವರ್‌ನಿಂದ ಆತನ ಖಾಸಗಿ ಭಾಗಕ್ಕೆ ತಿವಿದಿದ್ದಾನೆ. ದ್ವಿಚಕ್ರ ವಾಹನ ಶೋರೂಂನಲ್ಲಿ ಹಣ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿ ಶೋರೂಂ ಸಿಬ್ಬಂದಿ, ಇಬ್ಬರು ದಲಿತ ಯುವಕರ ಬಟ್ಟೆ ಬಿಚ್ಚಿ, ಅವರನ್ನು […]

