ರಸ್ತೆ ಅಪಘಾತ: ಖಾಸಗಿ ಚಾನೆಲ್‌ನ ವರದಿಗಾರ ಮೃತ್ಯು
ರಾಮನಗರ, ಎ.21: ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಚಾನೆಲ್ ಒಂದರ ರಾಮನಗರದ ಜಿಲ್ಲೆಯ ವರದಿಗಾರ ಸಾವನ್ನಪ್ಪಿರುವ ಘಟನೆ ರಾಮನಗರದ ಕಾರಾಗೃಹದಲ್ಲಿ ನಡೆದಿದೆ. ಮೃತರನ್ನು ಪಬ್ಲಿಕ್ ಟಿವಿ ರಾಮನಗರದ ವರದಿಗಾರ ಹನುಮಂತು ಎಂದು ಗುರುತಿಸಲಾಗಿದೆ. ಇವರು ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ವರದಿಯನ್ನು ಮಾಡಿ ಹಿಂದಿರುಗುತ್ತಿದ್ದಾಗ ರಾಮನಗರದ ಕಾರಾಗೃಹದ ಬಳಿ ಈ ಘಟನೆ ನಡೆದಿದೆ. ಹನುಮಂತು ಅವರು ಕಳೆದ 6 ವರ್ಷಗಳಿಂದಲೂ ರಾಮನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂರು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದರು. ಮೃತರು […]
ರಸ್ತೆ ಅಪಘಾತ: ಖಾಸಗಿ ಚಾನೆಲ್‌ನ ವರದಿಗಾರ ಮೃತ್ಯು Read More »
ಕರ್ನಾಟಕ
