ಮುಂಬೈ ವಾಲ್ಕೇಶ್ವರ ಶ್ರೀಕಾಶಿ ಮಠಕ್ಕೆ ಭೇಟಿ – ಜಿಎಸ್ಬಿ ಸೇವಾ ಮಂಡಲ ಶ್ರೀ ಗಣೇಶನ ದರ್ಶನ ಪಡೆದ ಸಂಸದ ಕ್ಯಾ.ಚೌಟ
(ನ್ಯೂಸ್ ಕಡಬ) newskadaba.com ಮುಂಬೈ, ಸೆ. 12. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳವಾರದಂದು ಸಂಜೆ ಮುಂಬೈನಲ್ಲಿರುವ ವಾಲ್ಕೇಶ್ವರ ಶ್ರೀ ಕಾಶಿ ಮಠಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.. ವಾರಣಾಸಿಯ ಶ್ರೀ ಕಾಶಿಮಠ ಸಂಸ್ಥಾನದ ಶಾಖಾ ಮಠವಾಗಿರುವ ವಾಲ್ಕೇಶ್ವರ ಶ್ರೀ ಕಾಶಿ ಮಠವು ಅಗಾಧ ಅಧ್ಯಾತ್ಮದ ಶಕ್ತಿ ಕೇಂದ್ರವಾಗಿದೆ. ಜಿಎಸ್ಬಿ ಸಮುದಾಯದವರ ಪ್ರಮುಖ ಧಾರ್ಮಿಕ ಶಕ್ತಿಯ ಪವಿತ್ರ ನೆಲವಿದು. ಸುಮಾರು 5000 ವರ್ಷಗಳ ಹಿಂದಿನ ವೇದವ್ಯಾಸರ ವಂಶಕ್ಕೆ ಸೇರಿದ ಶ್ರೀ ಕಾಶಿಮಠ […]
