ಮರ್ಧಾಳದಿಂದ ಸುಬ್ರಹ್ಮಣ್ಯದವರೆಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮೀರಾ ಸಾಹೇಬ್ ಸಲಹೆ
(ನ್ಯೂಸ್ ಕಡಬ) newskadaba.com ಕಡಬ, ಜೂ. 18. ಮೆಸ್ಕಾಂ ಉಪ ವಿಭಾಗದ ಮೆಸ್ಕಾಂ ಜನ ಸಂಪರ್ಕ ಸಭೆಯು ಮಂಗಳವಾರದಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ಸಮಸ್ಯೆಗೆ ವಿದ್ಯುತ್ ಲೈನಿನ ಸುತ್ತಮುತ್ತ ಇರುವ ಮರದ ಕೊಂಬೆ, ಗೆಲ್ಲುಗಳು ಕೂಡ ಒಂದು ಕಾರಣವಾಗಿದ್ದು, ಕೂಡಲೇ ಮರದ ಗೆಲ್ಲುಗಳನ್ನು ಕತ್ತರಿಸುವಂತೆ ಗ್ರಾಹಕರು ಮೆಸ್ಕಾಂ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಹಕರ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂನ ಅಧೀಕ್ಷಕರು ಗಾಳಿ ಮಳೆಗೆ ಕೆಲವು ಕಡೆ ವಿದ್ಯುತ್ […]

