ಮಂಗಳೂರು: ಮುಂಗಾರು ಮಳೆ ಹಿನ್ನೆಲೆ ರಸ್ತೆ ಡಿವೈಡರ್ ಮೇಲಿನ ಬ್ಯಾನರ್ ತೆರವಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ
(ನ್ಯೂಸ್ ಕಡಬ) newskadaba.com, ಜೂ.11 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ರಸ್ತೆಗಳ ಡಿವೈಡರ್‌ಗಳ ಮೇಲಿರುವ ಅಪಾಯಕಾರಿ ಹಾಗೂ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಆದೇಶಿಸಿದ್ದಾರೆ. ಮುಂಗಾರು ಮಳೆ ಮತ್ತು ಗಾಳಿಗೆ ಇವು ಕಳಚಿ ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ಬಿದ್ದು ಜೀವಹಾನಿ ಸಂಭವಿಸುವ ಸಾಧ್ಯತೆಯಿದೆ.ಡಿವೈಡರ್‌ಗಳ ಮೇಲಿನ ಬ್ಯಾನರ್‌ಗಳಿಂದಾಗಿ ರಸ್ತೆ ದಾಟುವವರಿಗೆ ಮತ್ತು ವಾಹನ ಚಾಲಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳು ಹೆಚ್ಚುತ್ತಿವೆ ಎಂಬ ದೂರುಗಳು ಬಂದಿದ್ದವು. ಮಂಗಳೂರು […]

