ಮಂಗಳೂರು: ಬಸ್ ಢಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಮೃತ್ಯು

ಮಂಗಳೂರು, ಡಿ.28: ಚಾಲಕ ನಿಯಂತ್ರಣ ತಪ್ಪಿದ ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ರಾ.ಹೆ.ಯಲ್ಲಿ ಕೆತ್ತಿಕಲ್‌ನಲ್ಲಿ ಇಂದು ನಡೆದಿದೆ. ಮೃತಪಟ್ಟ ಚಾಲಕನ ಮಾಹಿತಿ ತಿಳಿದು ಬಂದಿಲ್ಲ. ಶ್ರೀರಾಮ್ ಟ್ರಾವೆಲ್ಸ್‌ಗೆ ಸೇರಿದ ಬಸ್ ಇದಾಗಿದ್ದು, ಮೂಡಬಿದಿರೆ ಕಡೆಯಿಂದ ಮಂಗಳೂರು ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ. ಅತಿವೇಗದಿಂದ ಬರುತ್ತಿದ್ದ ಬಸ್ ಕೆತ್ತಿಕಲ್ ಬಳಿಯ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ. ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿರುವ ಶಂಕೆ ವ್ಯಕ್ತವಾಗಿದೆ. […]

ಮಂಗಳೂರು: ಬಸ್ ಢಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್