ಮಂಗಳೂರು: ಟ್ಯಾಂಕರ್ ಢಿಕ್ಕಿ ಹೊಡೆದು ಬೈಕ್ ಸವಾರ ವಿದ್ಯಾರ್ಥಿ ಮೃತ್ಯು
ಮಂಗಳೂರು, ಫೆ.13: ಟ್ಯಾಂಕರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಂತೂರು ಸರ್ಕಲ್ ಬಳಿ ನಡೆದಿದೆ. ಮೃತರನ್ನು ಮಣ್ಣಗುಡ್ಡೆ ನಿವಾಸಿ, ನಗರದ ಬೆಸೆಂಟ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕಾರ್ತಿಕ್ ಮಲ್ಯ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಕಾರ್ತಿಕ್ ಸುರತ್ಕಲ್ ಕಡೆಯಿಂದ ನಂತೂರು ಸರ್ಕಲ್ ಬಳಿ ಬರುತ್ತಿದ್ದಂತೆ ಈ ಘಟನೆ ನಡೆದಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಟ್ಯಾಂಕರ್ ಢಿಕ್ಕಿ ಹೊಡೆದು ಬೈಕ್ ಸವಾರ ವಿದ್ಯಾರ್ಥಿ ಮೃತ್ಯು Read More »
ಕರಾವಳಿ
