ಮಂಗಳೂರು ಕಾರಾಗೃಹದಲ್ಲಿ ಸಸಿ ಮಾರಾಟ ಕೇಂದ್ರ ಉದ್ಘಾಟನೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಬೆಳೆಸಿದ ಸಸಿಗಳ ಮಾರಾಟ ಕೇಂದ್ರವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಉದ್ಘಾಟಿಸಿದರು. ಕೆಲವು ತಿಂಗಳ ಹಿಂದೆ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ಕೈದಿಗಳು ಬೆಳೆಸಿದ್ದ ವಿವಿಧ ಸಸಿಗಳ ಸಸ್ಯ ಕ್ಷೇತ್ರವನ್ನು ಕಂಡು ಸಂತಸಗೊಂಡಿದ್ದರು. ಇವುಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರಾಗೃಹದ ಮುಂಭಾಗದ ಜಾಗದಲ್ಲಿ ಸಸಿ ಮಾರಾಟ ಕೇಂದ್ರವನ್ನು ಸ್ಥಾಪಿಸಲಾಗಿದೆ. […]
ಮಂಗಳೂರು ಕಾರಾಗೃಹದಲ್ಲಿ ಸಸಿ ಮಾರಾಟ ಕೇಂದ್ರ ಉದ್ಘಾಟನೆ Read More »
ಕರಾವಳಿ