ಮಂಗಳೂರಿನಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಯತ್ನ: ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ₹84 ಲಕ್ಷ ಹಣ ಉಳಿತಾಯ
(ನ್ಯೂಸ್ ಕಡಬ) newskadaba.com, ಡಿ.05 : ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ವೃದ್ಧ ದಂಪತಿಯನ್ನು ಗುರಿಯಾಗಿಸಿ ನಡೆದ ಭೀಕರ ‘ಡಿಜಿಟಲ್ ಅರೆಸ್ಟ್’ (Digital Arrest) ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ವಂಚನೆಯಲ್ಲಿ ದಂಪತಿಗಳ 84 ಲಕ್ಷ ರೂ. ಮೊತ್ತದ ಹಣವನ್ನು ಕದಿಯಲು ಯತ್ನಿಸಲಾಗಿತ್ತು. ಆದರೆ, ದಂಪತಿಯ ಬ್ಯಾಂಕ್ ಮ್ಯಾನೇಜರ್ ಅವರ ಸಮಯಪ್ರಜ್ಞೆ ಮತ್ತು ತಕ್ಷಣದ ಕ್ರಮದಿಂದಾಗಿ ಬೃಹತ್ ವಂಚನೆಯು ತಪ್ಪಿದ್ದು, ಮಂಗಳೂರು ಗ್ರಾಮಾಂತರ ಭಾಗದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದೆ. ಡಿ. 1ರ ಸಂಜೆ, […]

