ಬೈಲೂರು-ಪಳ್ಳಿ ಅರಣ್ಯ ಪರಿಸರದಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ನಾಗರೀಕರು
(ನ್ಯೂಸ್ ಕಡಬ) newskadaba.com ನ. 23. ತಾಲೂಕು ವ್ಯಾಪ್ತಿಯಲ್ಲಿ ಬರುವ ಬೈಲೂರು ಸಮೀಪದ ಪಳ್ಳಿ, ಕಣಂಜಾರ್, ರಂಗನಪಲ್ಕೆ, ಎಲಿಯಾಲ್, ನಿಂಜೂರ್ ಪರಿಸರದಲ್ಲಿ ಚಿರತೆ ಹಾವಳಿಯಿಂದ ಜನರು ನಿದ್ದೆ ಕಳೆದುಕೊಂಡಿದ್ದಾರೆ. ಪಳ್ಳಿ, ಮಾರುತಿನಗರ, ಮಂಗಲ್ದಿ ಮಠ ಪರಿಸರದಲ್ಲಿ ಚಿರತೆ ಅಡ್ಡಾಡುತ್ತಿದೆ. ಹಗಲಲ್ಲೇ ಜೋರಾಗಿ ಕೂಗುತ್ತ ಓಡಾಡುತ್ತಿರುವ ಕಾರಣ ಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ನಾಯಿ, ಬೆಕ್ಕುಗಳು ಚಿರತೆಗೆ ಆಹಾರವಾಗುತ್ತಿದ್ದು ಇಲ್ಲಿ ಬೋನ್ ಇಟ್ಟು ಚಿರತೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.
ಬೈಲೂರು-ಪಳ್ಳಿ ಅರಣ್ಯ ಪರಿಸರದಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ನಾಗರೀಕರು Read More »
ಕರಾವಳಿ