ಬಂಟ್ವಾಳದಲ್ಲಿ ನಾಮಫಲಕ ಹಾಕದೆ ರಸ್ತೆ ಕಾಮಗಾರಿ: ಕಿರು ಸೇತುವೆ ನಿರ್ಮಾಣ ಗುಂಡಿಗೆ ಬಿದ್ದ ಕಾರು, ಚಾಲಕನಿಗೆ ಗಾಯ
ಬಂಟ್ವಾಳ, ಜ.9: ಯಾವುದೇ ನಾಮಫಲಕ ಹಾಕದೆ ರಸ್ತೆಯ ಕಾಮಗಾರಿ ನಡೆಸುತ್ತಿರುವ ಪರಿಣಾಮ ಕಾರೊಂದು ಕಿರು ಸೇತುವೆಯ ನಿರ್ಮಾಣದ ಗುಂಡಿಗೆ ಬಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಾಲಕ ರಾಜೇಶ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ರಾಜೇಶ್ ಬಂಟ್ವಾಳ ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ರಸ್ತೆ ಕಾಣದೆ ಕಾರು ಗುಂಡಿಗೆ ಬಿದ್ದಿದೆ. ಬಿ.ಸಿರೋಡು – ಪುಂಜಾಲಕಟ್ಟೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಯಾವುದೇ ಮುನ್ಸೂಚನೆಯ ಫಲಕ ಹಾಕದೇ […]
