ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್‌ ಸವಾರರು ಸಾವು

(ನ್ಯೂಸ್ ಕಡಬ) newskadaba.com, ಜೂ.06. ಕಂಟೇನರ್‌ ಹಾಗೂ ಬೈಕ್‌ ನಡುವಿನ ಭೀಕರ ಅಪಘಾತದಲ್ಲಿ ಮೂವರು ಬೈಕ್‌ ಸವಾರರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ದಾಬಸಪೇಟೆಯ ಎಂ.ಇ ಸೋಲಾರ್ ಪ್ಲಾಂಟ್‌ನಲ್ಲಿ ಕೆಲಸ ಮುಗಿಸಿ ಬರುವಾಗ ತುಮಕೂರು (Tumkur) ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ದುರಂತ ನಡೆದಿದೆ. ರಾಜೇಶ್ (25), ಧನಂಜಯ್ (27), ಧನುಷ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಎಎಸ್ಪಿ ನಾಗರಾಜ್, ಡಿವೈಎಸ್ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಸಿಪಿಐ ರಾಮ್ ಪ್ರಸಾದಗ ದೌಡಾಯಿಸಿದ್ದು ಪರಿಶೀಲಿಸಿದ್ದಾರೆ.

ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್‌ ಸವಾರರು ಸಾವು Read More »

ಕರ್ನಾಟಕ