ತಿರುಪತಿ ತಿರುಮಲ ದೇವಸ್ಥಾನದಿಂದ ಹೊಸ ಪ್ರಯೋಗ: ಸರತಿ ಸಾಲಿನಲ್ಲೇ ಪ್ರಸಾದ ವಿತರಣೆಗೆ ‘ಮೂವಿಂಗ್ ಟೇಬಲ್’ ವ್ಯವಸ್ಥೆ
(ನ್ಯೂಸ್ ಕಡಬ) newskadaba.com, ಆ.08: ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಭಕ್ತಾದಿಗಳ ಅನುಕೂಲಕ್ಕಾಗಿ ಸರತಿ ಸಾಲಿನಲ್ಲೇ ಪ್ರಸಾದ ವಿತರಿಸುವ ನೂತನ ‘ಮೂವಿಂಗ್ ಟೇಬಲ್’ ವ್ಯವಸ್ಥೆಯನ್ನು ಪರಿಚಯಿಸಿದೆ.ಸುಮಾರು ₹10 ಲಕ್ಷ ವೆಚ್ಚದಲ್ಲಿ 7 ಮೀಟರ್ ಉದ್ದದ ಚಲಿಸುವ ಮೇಜನ್ನು ವಿನ್ಯಾಸಗೊಳಿಸಲಾಗಿದ್ದು, ಸಿಬ್ಬಂದಿ ಇದರ ಮೇಲೆ ಇರಿಸುವ ಪ್ರಸಾದವನ್ನು ಭಕ್ತರು ತಾವು ನಿಂತ ಸ್ಥಳದಲ್ಲೇ ಸುಲಭವಾಗಿ ಪಡೆದುಕೊಳ್ಳಬಹುದು. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ಈ ವ್ಯವಸ್ಥೆಯನ್ನು ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1/2, ನಾರಾಯಣಗಿರಿ ಶೆಡ್ ಹಾಗೂ ಮುಖ್ಯ ಸರತಿ ಸಾಲುಗಳಿಗೂ ವಿಸ್ತರಿಸಲು […]

