ಜಾತಿಗಣತಿ: ನಿನ್ನೆಗೆ ಶೇ.85.89 ಸಮೀಕ್ಷೆ ಪೂರ್ಣ
(ನ್ಯೂಸ್ ಕಡಬ) newskadaba.com, ಅ.11: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ (ಬೆಂಗಳೂರು) ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರ 2.09 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ನಡೆಸಿದ್ದು, ಶೇ.85.89ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ 1.47 ಕೋಟಿ ಕುಟುಂಬಗಳ ಸಮೀಕ್ಷೆ ಗುರಿ ನಿಗದಿಪಡಿಸಲಾಗಿತ್ತು. ಅ.7ಕ್ಕೆ ಅಂತಿಮ ಗಡುವು ವಿಧಿಸಿದ್ದರೂ ಶೇ.80ರಷ್ಟು ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದರಿಂದ ಗಡುವನ್ನು ಅ.18ರವರೆಗೆ ವಿಸ್ತರಿಸಲಾಗಿದೆ. ಗುರುವಾರದವರೆಗೆ 1,25,14,685 ಕುಟುಂಬಗಳ ಸಮೀಕ್ಷೆ ಮುಗಿದಿದ್ದು, ಶುಕ್ರವಾರ 2,09,824 ಮನೆಗಳ ಸಮೀಕ್ಷೆ ನಡೆಸಲಾಗಿದೆ. […]
ಜಾತಿಗಣತಿ: ನಿನ್ನೆಗೆ ಶೇ.85.89 ಸಮೀಕ್ಷೆ ಪೂರ್ಣ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
