ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ
ಮಂಗಳೂರು, ಮಾ.22: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂಗೆ ಮಂಗಳೂರಿನಲ್ಲಿ ಭಾರೀ ಬೆಂಬಲ ದೊರೆತಿದೆ. ಎಂದಿಗೂ ಜನರ ಓಡಾಟದಿಂದ ಕೂಡಿರುವ ಮಂಗಳೂರು ಇಂದು ಮುಂಜಾನೆಯೇ ಮೌನದಿಂದ ಕೂಡಿದೆ. ರವಿವಾರ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನ ಮಾಡಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು ಕೇವಲ ಬೆರಳೆಣಿಕೆಯ ಬೈಕ್‌ಗಳನ್ನು ಹೊರತುಪಡಿಸಿ ಬೇರಾವ ವಾಹನಗಳು ರಸ್ತೆಗೆ ಇಳಿದಿಲ್ಲ. ದೇವಾಲಯ, ಮಸೀದಿ, […]
ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್
