ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪಿಕಪ್..!
(ನ್ಯೂಸ್ ಕಡಬ) newskadaba.com ಜೂ. 20. ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹವನವೊಂದು ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಶುಕ್ರವಾರದಂದು ನಡೆದಿರುವ ಬಗ್ಗೆ ವರದಿಯಾಗಿದೆ. ಸಂಪಾಜೆಯಿಂದ ಅರಮನೆ ಎಂಬಲ್ಲಿಯ ತೋಟಕ್ಕೆ ಪಿಕಪ್ ನಲ್ಲಿ ಕೆಲಸದವರನ್ನು ಮತ್ತು ಸಿಮೆಂಟ್ ಲೋಡ್ ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪಿಕಪ್..! Read More »
ಕರಾವಳಿ, ಕ್ರೈಮ್ ನ್ಯೂಸ್