ಗ್ರಾಮೀಣ ಭಾಗದ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್? 25 ದಿನದ ಮರು ಬುಕ್ಕಿಂಗ್ ನಿಯಮಕ್ಕೆ ಅಶ್ರಫ್ ಗುಂಡಿ ಮನವಿ.
(ನ್ಯೂಸ್ ಕಡಬ) newskadaba.com, ಮಾ.16: ನಗರ ಪ್ರದೇಶದ ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ ಮರು ಬುಕ್ಕಿಂಗ್ ಅವಧಿಯನ್ನು 25 ದಿನಗಳು ನಿಗಧಿಪಡಿಸಿದಂತೆ ಗ್ರಾಮೀಣ ಪ್ರದೇಶದಲ್ಲಿಯು 45 ದಿನಗಳ ಬದಲು 25 ದಿನಗಳಿಗೆ ಸೀಮಿತಗೊಳಿಸಬೇಕೆಂದು ಸುಳ್ಯ ತಾಲೂಕು ಕೆ.ಡಿಪಿ ಸದಸ್ಯ ಅಶ್ರಫ್ ಗುಂಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ. ಅಲ್ಲದೆ ಮುಂದೆ ಬರುವ ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ..

