ಕೊೈಲ ಗ್ರಾಮಸಭೆ
(ನ್ಯೂಸ್ ಕಡಬ) newskadaba.comಕಡಬ,ಫೆ.09. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಳವಡಿಸಲಾಗಿರುವ ದಾರಿದೀಪಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಲೋಪ ಎಸೆಗಲಾಗಿದೆ ಎಂದು ಆರೋಪ ವ್ಯಕ್ತವಾದ ಘಟನೆ ಕೊೈಲ ಗ್ರಾಮ ಸಭೆಯಲ್ಲಿ ನಡೆದಿದೆ. ಸಭೆ ಗ್ರಾ.ಪಂ.ಅಧ್ಯಕ್ಷೆ ಹೇಮಾ ಎಂ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ತಾ.ಪಂ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್‍ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾ.ಪಂ.ವತಿಯಿಂದ ಸೋಲಾರ್ ದಾರಿದೀಪ ನಿಯಮಾನುಸಾರ ಅಳವಡಿಕೆಯಾಗಿಲ್ಲ. ಅಳವಡಿಸಿರುವ ಸೋಲಾರ್ ದಾರಿದೀಪಗಳು ಗುಣಮಟ್ಟದಿಂದ ಇಲ್ಲ ಅಲ್ಲದೆ ಟೆಂಡರ್ ಪ್ರಕ್ರಿಯೆಯ ನಿಗದಿತ ದಿನದೊಳಗೆ ಪೂರ್ಣಗೊಳಿಸಿ ಕಂಪೆನಿಯೊಂದಕ್ಕೆ ಟೆಂಡರ್ ನೀಡಲಾಗಿದೆ […]

