ಕೆವೈಸಿ ಅಪ್ ಡೇಟ್ ನೆಪದಲ್ಲಿ ಸಾವಿರಾರು ರೂ.ವಂಚನೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ನ. 09. ಕೆವೈಸಿ ಅಪ್‌ ಡೇಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯೋರ್ವರ ಮೊಬೈಲ್ ಗೆ ನ.7ರಂದು ಕೆನರಾ ಬ್ಯಾಂಕ್‌ ನವರು ಎಂದು ಹೇಳಿ ಕರೆ ಮಾಡಿದ್ದ ಅಪರಿಚಿತರು, ಕೆವೈಸಿ ಅಪ್‌ಡೇಟ್ ಆಗದೇ ಇರುವುದರಿಂದ ಅಕೌಂಟ್ ಬ್ಲಾಕ್ ಮಾಡುವುದಾಗಿ ತಿಳಿಸಿ, ಬಳಿಕ ದೂರುದಾರರಿಂದ ಬ್ಯಾಂಕ್ ಖಾತೆ ವಿವರ, ಓಟಿಪಿ ಪಡೆದುಕೊಂಡ ಅಪರಿಚಿತರು, 51,908ರೂ. ಹಣವನ್ನು ಖಾತೆಯಿಂದ ಮೋಸದಿಂದ ಡ್ರಾ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

ಕೆವೈಸಿ ಅಪ್ ಡೇಟ್ ನೆಪದಲ್ಲಿ ಸಾವಿರಾರು ರೂ.ವಂಚನೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್