ಕಾರ್ಕಳ ನಕ್ರೆ ದೇವರ ಗುಡ್ಡೆ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ವೃದ್ಧನನ್ನುಸಮಯಕ್ಕೆ ಸರಿಯಾಗಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು
(ನ್ಯೂಸ್ ಕಡಬ) newskadaba.com ,ಜ.09 ಕಾರ್ಕಳ: ಬಾವಿಗೆ ಬಿದ್ದಿದ್ದ ವೃದ್ಧನನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ದೇವರ ಗುಡ್ಡೆ ಪ್ರದೇಶದಲ್ಲಿ, ಸುಮಾರು 30 ಅಡಿ ಆಳದ ಬಾವಿಗೆ ಚಂದು ಪರವ (70 ) ಎಂಬ ವರು ಬಿದ್ದ ಘಟನೆ ನಡೆದಿದೆ. ಕೈ–ಕಾಲುಗಳಿಗೆ ಪ್ಯಾರಲಿಸಿಸ್ ಇರುವ ಕಾರಣ ಚಲನೆಗೆ ಅಸಹಾಯಕನಾಗಿದ್ದ ಚಂದು ಪರವ ಅವರು ಅಜಾಗರೂಕತೆಯಿಂದ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ, ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಚಂದಶೇಖರ್ ಅವರ ನೇತೃತ್ವದಲ್ಲಿ […]
