ಕಡಬ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತ: ಹಂಪ್ಸ್ ನಿರ್ಮಿಸುವಂತೆ ಸಾರ್ವಜನಿಕರ ಅಗ್ರಹ ✍️ ಕೆ.ಎಸ್.ಬಾಲಕೃಷ್ಣ ಕೊಯಿಲ
(ನ್ಯೂಸ್ ಕಡಬ)newskadaba.com ಕಡಬ, ಅ. 05. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತಗಳಾಗುತ್ತಿದ್ದು, ಇಲ್ಲಿ ರಸ್ತೆಯಲ್ಲಿ ಹಂಪ್ಸ್ ನಿರ್ಮಾಣ ಮಾಡಬೇಕೆನ್ನುವ ಅಗ್ರಹ ಜೋರಾಗಿ ಕೇಳಿ ಬರುತ್ತಿದೆ. ಗಣೇಶ್ ಬಿಲ್ಡಿಂಗ್ ಬಳಿ ವಿವಿಧ ಅಂಗಡಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿ, ಸಿಬಿಎಸ್ಇ ಸ್ಕೂಲ್, ಹತ್ತಿರದಲ್ಲಿ ಹೋಟೇಲ್, ಬೈಕ್ ಶೋರೂಂ ಹೀಗೆ ಹತ್ತು ವಲವು ವಾಣಿಜ್ಯ ವ್ಯಾಪಾರ ಕೇಂದ್ರಗಳು ಇರುವುದರಿಂದ ವಾಹನಗಳ ಓಡಾಟ ಅಧಿಕವಾಗಿದೆ. ಸಹಜವಾಗಿಯೇ ಜನಸಂಖ್ಯೆ ಕೂಡಾ ಹೆಚ್ಚಾಗಿರುತ್ತದೆ. ಇನ್ನು ಇಲ್ಲಿ […]

