ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು► ಇ-ಜನ್ಮ ತಂತ್ರಾಂಶ ಕಾರ್ಯಾಗಾರ
(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.07.ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು ಇ-ಜನ್ಮ ತಂತ್ರಾಂಶದಿಂದ ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜನನ ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರಗಳಿಂದ ಎಲ್ಲರಿಗೂ ಪ್ರಯೋಜನವಾಗಲಿದೆ. ಜನರಿಗೆ ಹಾಗೂ ಸರ್ಕಾರಗಳಿಗೆ ಯೋಜನೆ ರೂಪಿಸಲು ಅಗತ್ಯ ಅಂಕಿಅಂಶಗಳ ಮಾಹಿತಿ ಪಡೆಯಲು ಇ- ತಂತ್ರಜ್ಞಾನ ನೆರವಾಗಲಿದೆ […]

