ಬ್ರೇಕ್ ಫೈಲ್ಯೂರಾಗಿ ಕಾರು, ಆಟೊ, ಬೈಕ್ಗೆ ಢಿಕ್ಕಿ ಹೊಡೆದ ಬಸ್: ಓರ್ವ ಮೃತ್ಯು, ಐವರಿಗೆ ಗಾಯ
ಬೆಂಗಳೂರು, ಜ.6: ಬಿಎಂಟಿಸಿ ಬಸ್-ಕಾರು, ಆಟೋ, ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ನಗರದ ಕೊಟ್ಟಿಗೆಪಾಳ್ಯ ಸಿಗ್ನಲ್ ಬಳಿ ನಡೆದಿದೆ. ಬ್ರೇಕ್ ಫೈಲ್ಯೂರ್ ನಿಂದ ಈ ಅಪಘಾತ ನಡೆದಿದೆನ್ನಲಾಗಿದೆ. ಅಪಘಾತದಲ್ಲಿ ಭೈರಪ್ಪ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ವಾಹನಗಳು ನುಜ್ಜುಗುಜ್ಜಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಬ್ರೇಕ್ ಫೈಲ್ಯೂರಾಗಿ ಕಾರು, ಆಟೊ, ಬೈಕ್ಗೆ ಢಿಕ್ಕಿ ಹೊಡೆದ ಬಸ್: ಓರ್ವ ಮೃತ್ಯು, ಐವರಿಗೆ ಗಾಯ Read More »
ಕರ್ನಾಟಕ