ಆಕ್ಟಿವಾ ಗೆ ಲಾರಿ ಢಿಕ್ಕಿ- ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಅ. 12. ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡೀಲ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಸವಾರನನ್ನು ಅಡ್ಯಾರ್‌ ಪದವಿನ ಜೋಸೆಫ್ ಎಂದು ಗುರುತಿಸಲಾಗಿದೆ. ಪಡೀಲ್‌ನಿಂದ ಬಿ.ಸಿ‌.ರೋಡ್ ಕಡೆಗೆ ತೆರಳುತ್ತಿದ್ದ ಲಾರಿಯು ಆಗಷ್ಟೇ ಪೆಟ್ರೋಲ್ ತುಂಬಿಸಿ ಬಂಕ್‌ನಿಂದ ಹೊರಬರುತ್ತಿದ್ದ ಆಕ್ಟಿವಾಗೆ ಢಿಕ್ಕಿ ‌ಹೊಡೆದಿದ್ದು, ಪರಿಣಾಮ ಸವಾರ ಜೋಸೆಫ್ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಆಕ್ಟಿವಾ ಗೆ ಲಾರಿ ಢಿಕ್ಕಿ- ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್