ಮಂಗಳೂರು

ಬಜ್ಪೆ: ಅಪ್ರಾಪ್ತೆಗೆ ಥಳಿಸಿದ ಮಹಿಳಾ ಪೇದೆ ವಿರುದ್ದ ದೂರು

(ನ್ಯೂಸ್ ಕಡಬ) newskadaba.com ಬಜ್ಪೆ ನ. 07: ಅಪ್ರಾಪ್ತೆಗೆ ಥಳಿಸಿದ ಆರೋಪದಡಿಯಲ್ಲಿ ಮಂಗಳೂರಿನ ಬಜ್ಪೆ ಠಾಣೆ ಮಹಿಳಾ ಪೇದೆ ವಿರುದ್ದ ಎಫ್ ಐಆರ್ ದಾಖಲಾಗಿದೆ.  ಅಪ್ರಾಪ್ತೆಯ ಪೋಷಕರು ಬಜ್ಪೆ ಠಾಣೆಯ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂಡಬಿದ್ರೆಯ ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಅಪ್ರಾಪ್ತೆಗೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ಯುವತಿ ತನ್ನ ಪೋಷಕರ ಜೊತೆ ಬಜ್ಪೆ ಪೊಲೀಸ್ ಠಾಣೆಗೆ ತೆರಳಿದ್ದಾಳೆ ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು 16 ವರ್ಷದ ಈ ಅಪ್ರಾಪ್ತೆಗೆ ಲಾಠಿಯಿಂದ ಹೊಡೆದಿದ್ದಾರೆ ಎಂಬ […]

ಬಜ್ಪೆ: ಅಪ್ರಾಪ್ತೆಗೆ ಥಳಿಸಿದ ಮಹಿಳಾ ಪೇದೆ ವಿರುದ್ದ ದೂರು Read More »

ಕರಾವಳಿ

ಮಂಡೆಕೋಲು : ಪುಟಾಣಿಗಳಿಗೆ ಒಲಿದ “ಸಿರಿಗನ್ನಡ ಕಂದ ಪ್ರಶಸ್ತಿ”

(ನ್ಯೂಸ್ ಕಡಬ) newskadaba.com ಮಂಡೆಕೋಲು ನ. 07: ಸೆಪ್ಟಂಬರ್, ಅಕ್ಟೋಬರ್ 2020ರ ಅವಧಿಯಲ್ಲಿ ಪ್ರಸಾರವಾದ ಹಾಡು ಮಾತಾಡು ಕಾರ್ಯಕ್ರಮ ಸರಣಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿದ್ದ ಒಂದೇ ಮನೆಯ ಇಬ್ಬರು ಅಂಗನವಾಡಿ ಪುಟಾಣಿಗಳ ಮುಡಿಗೆ ಇದೀಗಾ ಸಿರಿಗನ್ನಡ ಕಂದ ಪ್ರಶಸ್ತಿ ಒಲಿದಿದೆ. ಇವರು ದೇವರಗುಂಡ ಮೂಲದ ಹರೀಶ್ ಡಿ. ಆರ್ ರವರ ಮಗಳಾದ ತನ್ವಿ ಡಿ ಹಾಗೂ ನವೀನ್ ಡಿ ಆರ್ ರವರ ಮಗನಾದ ಆಶಿತ್ ಡಿ ಎನ್ ರವರಿಗೆ ಸಿರಿಗನ್ನಡ ಕಂದ ಪ್ರಶಸ್ತಿ ನೀಡಲಾಗಿದೆ. ಮಂಡೆಕೋಲು ಗ್ರಾಮದ

ಮಂಡೆಕೋಲು : ಪುಟಾಣಿಗಳಿಗೆ ಒಲಿದ “ಸಿರಿಗನ್ನಡ ಕಂದ ಪ್ರಶಸ್ತಿ” Read More »

ಕರಾವಳಿ

ಎಸ್ಕೇಪ್ ಆಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ.!

(ನ್ಯೂಸ್ ಕಡಬ) newskadaba.com ಭಟ್ಕಳ ನ. 07: ಅಕ್ಟೋಬರ್ 28 ರಂದು ಪರಾರಿಯಾಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ್ನು 14 ದಿನಗಳ ಕಾಲ ಬಾಲಭವನಕ್ಕೆ ಒಳಪಡಿಸಲಾಗಿದೆ. ಪೆರ್ಡೂರಿನ ಕುಕ್ಕೆ ಹಳ್ಳಿಯ ಅಪ್ರಾಪ್ತ ಜೋಡಿಯನ್ನು ಭಟ್ಕಳದಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.   ಅ. 28 ರಂದು ಕಾಲೇಜು ಗೆ ತೆರಳಿದ್ದ ಯುವತಿ, ತನ್ನ ಕಾಲೇಜಿನ ಯುವಕನ ಜೊತೆ ಬೈಕ್ ನಲ್ಲಿ ತೆರಳಿದ್ದಾಳೆ. ಬಳಿಕ ಖರ್ಚಿಗೆ ಹಣವಿಲ್ಲದಾಗ ತನ್ನ ಕಿವಿಓಲೆಯನ್ನು ಮಾರಾಟ ಮಾಡಿದ್ದಾರೆ.

ಎಸ್ಕೇಪ್ ಆಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ.! Read More »

ಕರಾವಳಿ

ಪುತ್ತೂರು: ಅತ್ಯುತ್ತಮ ದಿಗ್ವಿಜಯ ವರದಿಗಾರ ಅಶೋಕ್‍ಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್

(ನ್ಯೂಸ್ ಕಡಬ) newskadaba.com ಪುತ್ತೂರು, ನ. 07: ದಿಗ್ವಿಜಯ ನ್ಯೂಸ್ ಕನ್ನಡ ಸುದ್ದಿ ವಾಹಿನಿಯ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಸಂದರ್ಭ ಅತ್ಯುತ್ತಮ ವರದಿ ಮಾಡಿದ ಕೃಷ್ಣ ನಗರ ಬಡಾವು ನಿವಾಸಿ ಅಶೋಕ್ ಪೂಜಾರಿಯವರಿಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್ ಗೌರವ ಲಭಿಸಿದೆ.       ಮಂಗಳೂರು ಗೊಲಿಬಾರ್ ಸಂದರ್ಭದಲ್ಲಿ ವರದಿಗಾರಿಕೆ ಮಾಡಿ ವೀಕ್ಷಕರ ಮನಗೆದ್ದಿದ್ದಾರೆ. ಮೊದಲು ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆ, ಪ್ರಜಾ ವಾಹನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ, ಬಳಿಕ ದಿಗ್ವಿಜಯ ವಾಹಿನಿಗೆ ಸೇರ್ಪಡೆಗೊಂಡಿದ್ದರು. ಇದೀಗ ಉಡುಪಿಯಿಂದ ಮಂಗಳೂರಿಗೆ ವರ್ಗವಣೆಗೊಂಡ

ಪುತ್ತೂರು: ಅತ್ಯುತ್ತಮ ದಿಗ್ವಿಜಯ ವರದಿಗಾರ ಅಶೋಕ್‍ಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್ Read More »

ಕರಾವಳಿ

ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 07: ದಿಗ್ವಿಜಯ ನ್ಯೂಸ್ ಚಾನೆಲ್ ನ ಆಂಕರ್ ಆಗಿರುವ ಉಪ್ಪಿನಂಗಡಿಯ ರಕ್ಷತ್ ಶೆಟ್ಟಿವರಿಗೆ ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಠಿತ ನ್ಯಾಷನಲ್ ಟೆಲಿವಿಷನ್ ಅವಾರ್ಡ್‍ನಲ್ಲಿ ಬೆಸ್ಟ್ ಪ್ರೈಂ ಟೈಮ್ ಆಂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.     ಇವರು ನಿರೂಪಕರಾಗಿ, ಕಾರ್ಯಕ್ರಮ ನಿರ್ಮಾಪಕರಾಗಿರುವ ಮೆಗಾ ಡಿಬೇಟ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಚರ್ಚಾ ಕಾರ್ಯಕ್ರಮ ಪ್ರಶಸ್ತಿ, ಒಟ್ಟು 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಇವರು ಉಪ್ಪಿನಂಗಡಿ ನಿವಾಸಿಯಾಗಿರುವ ರಕ್ಷತ್ ಶೆಟ್ಟಿ ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು

ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ Read More »

ಕರಾವಳಿ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ನ. 07: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ(1) ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ.       ವಾಸುದೇವ ಸಾಮಗ ಅವರು ತೆಂಕು-ಬಡಗುತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟಿದ್ದು, ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಸ್ತ್ರೀವೇಷವನ್ನು ನಿರ್ವಹಿಸಿದ್ದಾರೆ. ಇವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದು, ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ ಕಂಸ ಕೃಷ್ಣ, ರುಕ್ಮಾಂಗದ-ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.  

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ Read More »

ಕರಾವಳಿ

ಕೊಲ್ಲಮೊಗ್ರ: ಮನೆ – ಮನೆಗಳಿಗೆ ಭೇಟಿ ನೀಡಿ ಕೊರೋನಾ ಟೆಸ್ಟ್

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ನ. 07: ಕೊಲ್ಲಮೊಗ್ರ ಭಾಗಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಕೊರೋನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ.     ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರ ಕೊರೋನಾ ಪರೀಕ್ಷೆಯನ್ನು ಮಾಡಲಾಗುತ್ತಿದೆ.  

ಕೊಲ್ಲಮೊಗ್ರ: ಮನೆ – ಮನೆಗಳಿಗೆ ಭೇಟಿ ನೀಡಿ ಕೊರೋನಾ ಟೆಸ್ಟ್ Read More »

ಕರಾವಳಿ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್

(ನ್ಯೂಸ್ ಕಡಬ) newskadaba.com ಕೇರಳ ನ. 07:  ಮೊದಲನೆ ಬಾರಿಗೆ ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್(TDB)ನ ಅಡಿಯಲ್ಲಿ ನಿರ್ವಹಣೆಯಾಗುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ನೇಮಕವಾಗಲಿದ್ದಾರೆ.   TDB ಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಕೇರಳದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಜನರನ್ನು ನೇಮಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ಧರಿಸಿದೆ.”TDB ಅಡಿಯಲ್ಲಿ ಬರುವ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 07: ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಚಿನ್ನದ ಸರ ಎಗರಿಸಿದ್ದ ಖದೀಮನನ್ನು ಉಳ್ಳಾಲ ಪೊಲೀಸರು ಘಟನೆ ನಡೆದ ಮೂರೇ ಘಂಟೆಯಲ್ಲಿ ಬಂದಿಸಿದ್ದಾರೆ.ಆರೋಪಿಯನ್ನು ಕೇರಳ ಮೂಲದ ಸುಲ್ತಾನ್ (28) ಎಂದು ತಿಳಿದು ಬಂದಿದೆ.   ಶುಕ್ರವಾರ ಸಂಜೆ ವೇಳೆಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಯುವತಿಯ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್ Read More »

ಕರಾವಳಿ

ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.!

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 07: ಬೆಳ್ಳಂ ಬೆಳಿಗ್ಗೆ  ಕೆಎಎಸ್ ಅಧಿಕಾರಿಗೆ ಎಸಿಬಿ ಶಾಕ್ ನೀಡಿದ್ದಾರೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿಯಾಗಿರುವ ಸುಧಾ ಅವರ ಕೊಡಿಗೇನಹಳ್ಳಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಯಲಹಂಕದಲ್ಲಿರುವ ಫ್ಲಾಟ್, ಬ್ಯಾಟರಾಯನಪುರದ ಮನೆ, ಬಿಇಎಂಎಲ್ ನಲ್ಲಿರುವ ನಿವಾಸ, ಶಾಂತಿನಗರದಲ್ಲಿರುವ ಕಚೇರಿ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿಯ ತಂಕಬಟ್ಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.! Read More »

ಕರಾವಳಿ
Scroll to Top