ಮಂಗಳೂರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪನೆಗೆ ಬೇಡಿಕೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ನ. 09: ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರು ಪಸಿದ್ಧ ಹಾಗೂ ಪವಿತ್ರವಾದ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಬೇಕೆಂಬುದು ಬಹುಕಾಲದ ಕೂಗು. ಆರೋಗ್ಯ ಸಮಸ್ಯೆಯಾದಲ್ಲಿ ಚಿಕಿತ್ಸೆಗೆ ದೂರದೂರಿಗೆ ತೆರಳಬೇಕಾದ ಅನಿವಾರ್ಯತೆ ಸುಬ್ರಹ್ಮಣ್ಯದಲ್ಲಿ ಎದುರಾಗಿರುವುದರಿಂದ ಕ್ಷೇತ್ರಕ್ಕೆ ಬರುವ ಸಹಸ್ರಾರು ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಕುಕ್ಕೆ ದೇವಳದಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಈ ಸಂಬಂಧ ನಾಗರಿಕರು ಪೂರ್ವಭಾವಿ ಸಭೆಯನ್ನೂ ನಡೆಸಿದ್ದಾರೆ.ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಗಳು ಮಾತ್ರ […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪನೆಗೆ ಬೇಡಿಕೆ Read More »

ಕರಾವಳಿ

ಕುಕ್ಕೆ ಚಂಪಾ ಷಷ್ಠಿ ಜಾತ್ರೋತ್ಸವ ➤ ಶೀಘ್ರವೇ ಜಿಲ್ಲಾಮಟ್ಟದ ಸಭೆ: ಸಚಿವ ಕೋಟ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 09 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ನಡೆಸುವ ಬಗ್ಗೆ ಚರ್ಚಿಸಲು ಶೀಘ್ರವೇ ಜಿಲ್ಲಾಮಟ್ಟದ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಜಾತ್ರೋತ್ಸವ ನಡೆಸುವ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.     ಕೋವಿಡ್‌-19 ಗಮನದಲ್ಲಿಟ್ಟುಕೊಂಡು, ಅದರ ಮುಂಜಾಗ್ರತಾ ನಿಯಮ ಪಾಲಿಸಿಕೊಂಡು ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ನಡೆಸುವ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ,

ಕುಕ್ಕೆ ಚಂಪಾ ಷಷ್ಠಿ ಜಾತ್ರೋತ್ಸವ ➤ ಶೀಘ್ರವೇ ಜಿಲ್ಲಾಮಟ್ಟದ ಸಭೆ: ಸಚಿವ ಕೋಟ Read More »

ಕರಾವಳಿ

ಚೀನಾದಿಂದ ಮತ್ತೊಂದು ವೈರಸ್ ವೈರಲ್.!

(ನ್ಯೂಸ್ ಕಡಬ) newskadaba.com ಬೀಜಿಂಗ್ ನ. 09: ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದು, ಕೊರೊನಾ ಬೆನ್ನಲ್ಲೇ ಮತ್ತೊಂದು ಆಘಾತ ಚೀನಾದಿಂದ ಇಡೀ ವಿಶ್ವಕ್ಕೆ ಎದುರಾಗಿದೆ.       ಚೀನಾದ ಗನ್ನು ಪ್ರಾಂತ್ಯದ ರಾಜಧಾನಿ ಲನ್ ಜೌ ನಗರದಲ್ಲಿ 6000ಕ್ಕೂ ಅಧಿಕ ಮಂದಿಗೆ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದೆ. ಈ ರೋಗ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಮೇಕೆ, ಹಸು, ನಾಯಿ, ಹಂದಿ, ಕುರಿಗಳ ಸಂಪರ್ಕದಿಂದ ಚೀನಾದಲ್ಲಿ ಮನುಷ್ಯನಿಗೆ ತಗುಲಿದೆ ಎನ್ನಲಾಗಿದೆ. ಹಾಲಿನ ಮೂಲಕವು ಮನುಷ್ಯನಿಗೆ ಬರುವ ಸಾಧ್ಯತೆ

ಚೀನಾದಿಂದ ಮತ್ತೊಂದು ವೈರಸ್ ವೈರಲ್.! Read More »

ಕರಾವಳಿ

ಕಾಸರಗೋಡು: ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ನ.9: ಸ್ಕೂಟರ್ ಮಗುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಮಂಜೇಶ್ವರ ಕುಂಜತ್ತೂರು ಪದವಿನಲ್ಲಿ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಗದಗ ಮೂಲದ ಯುವಕ ತಲಪಾಡಿ ದೇವಿನಗರದಲ್ಲಿ ವಾಸವಾಗಿರುವ ಹನುಮಂತ ಎಂದು ಗುರುತಿಸಲಾಗಿದೆ.   ಮಂಗಳೂರು ಕೊಡಿಯಾಲ್ ಬೈಲ್ ನ ಕ್ಯಾಂಟೀನ್ ವೊಂದರಲ್ಲಿ ದುಡಿಯುತ್ತಿದ್ದ ಹನುಮಂತ ಹಲವು ವರ್ಷಗಳಿಂದ ದೇವಿನಗರದಲ್ಲಿ ವಾಸವಾಗಿದ್ದರು. ಆದರೆ ಶನಿವಾರ ಮುಂಜಾನೆ ಕುಂಜತ್ತೂರು ಪದವಿ ರಸ್ತೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಕೂಟರ್ ಅಪಘಾತದಿಂದ ಮೃತಪಟ್ಟಿರುವುದಾಗಿ ಹೇಳಲಾಗುತ್ತಿತ್ತು. ಅವರ ತಲೆಗೆ ಸಣ್ಣ ಪುಟ್ಟ ಗಾಯಗಳು

ಕಾಸರಗೋಡು: ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಕ್ಕೆಪದವು : ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್

(ನ್ಯೂಸ್ ಕಡಬ) newskadaba.com ಕಕ್ಕೆಪದವು ನ. 09: ಕಕ್ಕೆಪದವಿನಲ್ಲಿ ನೂತನವಾಗಿ ಪೆಟ್ರೋಲ್ ಪಂಪ್ ವೊಂದು ಶುಭಾರಂಭಗೊಂಡಿದೆ. ಕಕ್ಕೆಪದವು ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್ ಇದರ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು.   ಈ ಸಂದರ್ಭದಲ್ಲಿ ಮಾಲಕರಾದ ರಂಗನಾಥ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ವಿಶ್ವನಾಥ್ ಬಿತ್ತ,ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.  

ಕಕ್ಕೆಪದವು : ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್ Read More »

ಕರಾವಳಿ

ಕೆದಿಲ : “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಗಾರದ ಸಮರೋಪ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 09: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.), ಶ್ರೀ ದೇವಿ ಭಜನಾ ಮಂಡಳಿ ಗಾಂಧಿನಗರ ಕೆದಿಲ ಮತ್ತು ಶ್ರೀ ದೇವಿ ಸ್ಪೋರ್ಟ್ಸ್ ಕ್ಲಬ್ ಗಾಂಧಿನಗರ ಕೆದಿಲ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಗಾಂಧಿನಗರ ಕೆದಿಲ ಶ್ರೀ ದೇವಿ ಸಭಾಭವನದಲ್ಲಿ ದಿನಾಂಕ 08-11-2020 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.   ಕಾರ್ಯಕ್ರಮವನ್ನು ಶ್ರೀದೇವಿ ಭಜನಾ ಮಂಡಳಿಯ

ಕೆದಿಲ : “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಗಾರದ ಸಮರೋಪ Read More »

ಕರಾವಳಿ

ಸುಳ್ಯ : ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ಪರಿಹಾರಧನ ವಿತರಣೆ

(ನ್ಯೂಸ್ ಕಡಬ) newskadaba.com ಸುಳ್ಯ ನ. 09: ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ತಹಶೀಲ್ದಾರ್ ಪರಿಹಾರಧನ ವಿತರಣೆ ಮಾಡಿದ್ದಾರೆ.   ಸುಳ್ಯ ತಾಲೂಕಿನ ಕಸಬಾ ಗ್ರಾಮದ ಕಲ್ಲು ಮುಟ್ಲು ಜಯರಾಮ ನಾಯರ್ ಎಂಬವರ ನಾಯರ್ ಎಂಬುವರ ಮನೆಯ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು. ಆದರೆ ಅವರಿಗೆ ಯಾವುದೇ ಪರಿಹಾರ ನಿಗದೇ ಇದ್ದಾಗ, ಅಂಬೇಡ್ಕರ್ ತತ್ವ ರಕ್ಷಾಣಾ ವೇದಿಕೆಗೆ ತಿಳಿಸಿದ್ದರು. ಈ ಕುರಿತು ಅಧ್ಯಕ್ಷರಾದ ಪಿ.ಸುಂದರ್ ಪಾಟಾಜೆಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇವರ ಪತ್ರ ಮನವಿಗೆ

ಸುಳ್ಯ : ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ಪರಿಹಾರಧನ ವಿತರಣೆ Read More »

ಕರಾವಳಿ

ಹಿಂ.ಜಾ.ವೆ ಯಿಂದ ಮಾಹಿತಿ ➤ ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ,ಆರೋಪಿಗಳು ಪರಾರಿ.!

(ನ್ಯೂಸ್ ಕಡಬ) newskadaba.com ಕೆದಿಲ ನ. 09: ಹಿಂದೂ ಜಾಗರಣ ವೇದಿಕೆಯ ಮಾಹಿತಿಗೆ ಸ್ಪಂದಿಸಿದ ಪುತ್ತೂರು ನಗರ ಪೊಲೀಸರ ತಂಡ ಕೆದಿಲದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಖಾನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮೂರು ಹೋರಿ ಕರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.   ಪರಾರಿಯಾಗಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು, ಕೂಡಲೇ ಬಂಧಿಸುವಂತೆ ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ ಮನವಿ ಮಾಡಿ ಒತ್ತಾಯಿಸಿದ್ದಾರೆ. ಕೆದಿಲ ಗ್ರಾಮದ ಹಲವೆಡೆ ಎಗ್ಗಿಲ್ಲದೆ ಅಕ್ರಮ

ಹಿಂ.ಜಾ.ವೆ ಯಿಂದ ಮಾಹಿತಿ ➤ ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ,ಆರೋಪಿಗಳು ಪರಾರಿ.! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ.9: ಮೂಡಬಿದಿರೆಯ ಬೆಳುವಾಯಿ ಎಂಬಲ್ಲಿ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸುರತ್ಕಲ್ ಕಾಟಿಪಳ್ಳ ನಿವಾಸಿ ನಿಹಾಲ್ ಶಾ(20) ಎಂದು ಗುರುತಿಸಲಾಗಿದೆ.       ಸ್ನೇಹಿತರ ಜೊತೆಗೂಡಿ ನಿಹಾಲ್ ಈಜಲು ತೆರಳಿದ್ದರು. ಮಠದಕೆರೆ ಎಂಬಲ್ಲಿ ಕೆರೆಗೆ ಇಳಿದಿದ್ದ ವೇಳೆ ನೀರಲ್ಲಿ ಮುಳುಗಿ ನಿಹಾಲ್ ಶಾ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಈಜುಗಾರ ಅಂಥೋಣಿ ಯವರು ಧಾವಿಸಿದ್ದು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ಮೂಡಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು Read More »

ಕರಾವಳಿ

ಸುಳ್ಯ: ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಾಬ್ ದುರಸ್ಥಿ

(ನ್ಯೂಸ್ ಕಡಬ) newskadaba.com ಸುಳ್ಯ, ನ.8: ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಮುಖ್ಯ ರಸ್ತೆ ಬದಿಗೆ ಅಳವಡಿಸಿದ ಸ್ಲಾಬ್ ತುಂಡಾಗಿ ಹಾಗೂ ಕುಸಿದು ಬಿದ್ದು, ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.     ಇದರಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಶ್ರಮದಾನ ಮಾಡಿ ದುರಸ್ಥಿ ಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸುಳ್ಯ ಘಟಕದ ಗೌರವ ಅಧ್ಯಕ್ಷ ಅಶೋಕ್ ಕುಮಾರ್, ರುಕ್ಮಯ್ಯ ಕುರುಂಜಿ, ನಾರಾಯಣ, ಗಣೇಶ ಪಲ್ಲತಡ್ಕ, ವಿಜಯ ಕುರುಂಜಿ, ಚಿದಾನಂದ ಕಲ್ಲಗುಡ್ಡೆ, ಗಿರೀಶ ಕಲ್ಲಗುಡ್ಡೆ,

ಸುಳ್ಯ: ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಾಬ್ ದುರಸ್ಥಿ Read More »

ಕರಾವಳಿ
Scroll to Top