ಮಂಗಳೂರು

ನೈಟ್ ಕರ್ಫ್ಯೂ ವಿಚಾರವನ್ನು ಜಾತಿ-ಧರ್ಮದ ಬಣ್ಣದಲ್ಲಿ ನೋಡಬೇಡಿ ➤ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ವಿಚಾರವನ್ನು ಜಾತಿ, ಧರ್ಮದ ಬಣ್ಣದಲ್ಲಿ ನೋಡಬಾರದು. ಯಾವುದೇ ಜಾತಿ, ಮತ, ಧರ್ಮಗಳು ರೋಗಕ್ಕಿಲ್ಲ. ಆದರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ದ.ಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರೋಗಾಣು ಎಲ್ಲರಿಗೂ ಬಂದೇ ಬರುತ್ತದೆ. ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಪ್ರತಿಯೊಬ್ಬರ ಪ್ರಾಣ ಮುಖ್ಯವಾಗೊದೆ. ಡಬ್ಲ್ಯುಹೆಚ್‌ಒ ಮಾರ್ಗಸೂಚಿ ಪ್ರಕಾರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು. […]

ನೈಟ್ ಕರ್ಫ್ಯೂ ವಿಚಾರವನ್ನು ಜಾತಿ-ಧರ್ಮದ ಬಣ್ಣದಲ್ಲಿ ನೋಡಬೇಡಿ ➤ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ Read More »

ಕರಾವಳಿ, ಕರ್ನಾಟಕ

ನೈಟ್‌ ಕರ್ಫ್ಯೂ ಹಿನ್ನಲೆ ➤ ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ. ಕಟೀಲು ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿಸೆಂಬರ್ 24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ ಕೊನೆಗೊಳ್ಳಲಿದೆ. ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ಇಂದಿನಿಂದ

ನೈಟ್‌ ಕರ್ಫ್ಯೂ ಹಿನ್ನಲೆ ➤ ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ Read More »

ಕರಾವಳಿ, ಕರ್ನಾಟಕ

ಗ್ರಾಮ ಪಂಚಾಯಿತಿ ಚುನಾವಣೆ ➤ ಐವರ್ನಾಡು ಮತ್ತು ಅರಂಬೂರಿನಲ್ಲಿ ಬಿಜೆ.ಪಿ.ಜಿಲ್ಲಾಧ್ಯಕ್ಷರಿಂದ ಮತ ಯಾಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಐವರ್ನಾಡು ಮತ್ತು ಆಲೆಟ್ಟಿ ಗ್ರಾಮದ ಅರಂಬೂರು ವಾರ್ಡುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬೂಡಿಯಾರು ರಾಧಾಕೃಷ್ಣ ರೈ, ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿ , ಪಕ್ಷದ

ಗ್ರಾಮ ಪಂಚಾಯಿತಿ ಚುನಾವಣೆ ➤ ಐವರ್ನಾಡು ಮತ್ತು ಅರಂಬೂರಿನಲ್ಲಿ ಬಿಜೆ.ಪಿ.ಜಿಲ್ಲಾಧ್ಯಕ್ಷರಿಂದ ಮತ ಯಾಚನೆ Read More »

ಕರಾವಳಿ

ಜ್ವರ, ಶೀತ, ನೆಗಡಿ ರೋಗಗಳಿಗೆ ಔಷಧಿ ಪಡೆಯುವವರ ಮಾಹಿತಿ ನೀಡಿ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಖಾಸಗಿ, ಸರ್ಕಾರಿ ಆಸ್ಪತ್ರೆ, ಕ್ಲಿನಿಕ್ ಹಾಗೂ ಮೆಡಿಕಲ್ ಅಂಗಡಿಗಳಲ್ಲಿ ಜ್ವರ, ಶೀತ, ನೆಗಡಿ ರೋಗಗಳಿಗೆ ಔಷಧಿ ಪಡೆಯುವವರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆಯ ಪೂರ್ವ ತಯಾರಿ ಮತ್ತು 2021 ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಾಗೂ ರೂಪಾಂತರಿತ ಹೊಸ ಕೊರೋನಾ ರೋಗಗದ ಕುರಿತು ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ

ಜ್ವರ, ಶೀತ, ನೆಗಡಿ ರೋಗಗಳಿಗೆ ಔಷಧಿ ಪಡೆಯುವವರ ಮಾಹಿತಿ ನೀಡಿ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ Read More »

ಕರಾವಳಿ

ಮಲಯಾಳಂನ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕೊಚ್ಚಿ, ಡಿ.24:ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ (40) ನಿಧನರಾಗಿದ್ದಾರೆ.ಶಾನವಾಸ್‌ ಅವರಿಗೆ ಶೂಟಿಂಗ್ ವೇಳೆ ಹೃದಯಾಘಾತ ಉಂಟಾಗಿ, ಆಸ್ಪತ್ರೆ ಸೇರಿದ್ದು ಬಳಿಕ ಬ್ರೈನ್ ಡೆಡ್ ಆಗಿ ಬುಧವಾರ ಸಾವಿಗೀಡಾಗಿದ್ದಾರೆ. ‘ಗಾಂಧಿರಾಜನ್‌’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದ ವೇಳೆ, ಚಿತ್ರೀಕರಣದ ಸೆಟ್‌ನಲ್ಲೇ ಅವರಿಗೆ ಮಂಗಳವಾರ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಕೊಚ್ಚಿ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲೇ ಅವರಿಗೆ ಎರಡನೇ

ಮಲಯಾಳಂನ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ ಹೃದಯಾಘಾತದಿಂದ ನಿಧನ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು :ಬನ್ನೂರಿನಲ್ಲಿ ನಸುಕಿನ ಜಾವ ಚಿರತೆ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.24: ಡಿ.23ರ ಕಳೆದ ದಿನ ಬೆಳಿಗ್ಗೆ ಬನ್ನೂರು ಹಲಂಗದಲ್ಲಿ ಚಿರತೆಯೊಂದು ಕಾಣಿಸಿ ಕೊಂಡಿರುವುದಾಗಿ ವರದಿಯಾಗಿದೆ. ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ನಸುಕಿನ ಜಾವ ಭಕ್ತರೊಬ್ಬರು ಹೋಗುತ್ತಿದ್ದ ವೇಳೆ ಅವರಿಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಬಳಿಕ ಮಧ್ಯಾಹ್ನ ಮಾಜಿ ಪುರಸಭಾ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯೂ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಯು ಮಾಜಿ ಪುರಸಭಾ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯಿಂದ ಪಕ್ಕದ ತೆಂಗಿನ ಕೊಪ್ಪಳಕ್ಕೆ ಹೋಗಿದ್ದು ಅಲ್ಲಿಂದ ಡಂಪಿಂಗ್ ಯಾರ್ಡ್

ಪುತ್ತೂರು :ಬನ್ನೂರಿನಲ್ಲಿ ನಸುಕಿನ ಜಾವ ಚಿರತೆ ಪ್ರತ್ಯಕ್ಷ Read More »

ಕರಾವಳಿ

ನಿಟ್ಟೆ :ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಾರ್ ಮ್ಯಾನೇಜರ್ .!

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಡಿ.24:ಬಾರೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರ್ಕಳ ಸಮೀಪದ ನಿಟ್ಟೆ ನಿವಾಸಿ ಸುರೇಶ್ ಶೆಟ್ಟಿ ಎಂಬವರೆ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು,ಇವರು ಪಡುಬಿದ್ರಿ ಡೌನ್ ಟೌನ್ ಬಾರಿನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದು ಪಡುಬಿದ್ರಿ ಸಮೀಪದ ಅಡ್ವೆಯ ಲಾಡ್ಜಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.    

ನಿಟ್ಟೆ :ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಾರ್ ಮ್ಯಾನೇಜರ್ .! Read More »

ಕರಾವಳಿ

ಬಂಟ್ವಾಳ :ತೆಂಗಿನಕಾಯಿ ಮೇಲೆ ಲಿಪಿಯಲ್ಲಿ ಬರೆದ ಬರಹ ಪತ್ತೆ➤ ವಾಮಾಚಾರ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೊ ಲಿಪಿಯಲ್ಲಿ ಬರೆಯಲಾಗಿದೆ. ವಾಮಾಚಾರ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಅಭ್ಯರ್ಥಿಯೊಬ್ಬರ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಹೊಡೆದಿದ್ದು ಕಂಡುಬಂದಿದೆ. ಬಂಡಮುಗೇರು ಕ್ರಾಸ್ ನಲ್ಲಿಯೂ ಒಂದು ಯಾವುದೇ ಲಿಪಿ ಇರದ ಮಾಮೂಲಿ ತೆಂಗಿನಕಾಯಿ ಹಾಗೂ ಲಿಂಬೆ ಹುಳಿ ಒಡೆದಿರುವುದು ಕಂಡು ಬಂದಿದೆ.ನಂತರ ಚುನಾವಣೆ ದಿವಸ ಸಂಜೆ ಕಾರ್ಯಕರ್ತರೊಬ್ಬರ ಮನೆಯ ಹತ್ತಿರ

ಬಂಟ್ವಾಳ :ತೆಂಗಿನಕಾಯಿ ಮೇಲೆ ಲಿಪಿಯಲ್ಲಿ ಬರೆದ ಬರಹ ಪತ್ತೆ➤ ವಾಮಾಚಾರ ಶಂಕೆ Read More »

ಕರಾವಳಿ

ಬಂಟ್ವಾಳ :ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.24: ಬಂಟ್ವಾಳದ ಸಿದ್ಧಕಟ್ಟೆಯ ಆಟೋ ಚಾಲಕ ಶ್ರೀಧರ್ (36) ಮನೆಯ ಸಿಟೌಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ದಿನ ನಡೆದಿದೆ. ವೈಯಕ್ತಿಕ ಕಾರಣದಿಂದ ಅವರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಅವರ ಪತ್ನಿ, ಮಕ್ಕಳು ತವರಿಗೆ ಹೋಗಿದ್ದರು. ಬುಧವಾರ ಬೆಳಗ್ಗೆ ಶ್ರೀಧರ್ ಅವರು ಮನೆಯ ಸಿಟೌಟ್ ನಲ್ಲಿ ಈ ಕೃತ್ಯ ಎಸಗಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ

ಬಂಟ್ವಾಳ :ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಕರಾವಳಿ

ಬ್ರಹ್ಮಾವರ :ಸೊಸೈಟಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮಣಿಪಾಲ, ಡಿ.23: ಸೊಸೈಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ. ಪೃಥ್ವಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬ್ರಹ್ಮಾವರದ ಉಪ್ಪಿನಕೋಟೆಯಲ್ಲಿ ಕೆಲಸ ಮಾಡುತ್ತಿದ್ದ ಪೃಥ್ವಿ ಇಂದು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಬ್ರಹ್ಮಾವರ :ಸೊಸೈಟಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆಗೆ ಶರಣು Read More »

ಕರಾವಳಿ
Scroll to Top